Www.cnewstv.in / 12.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.
ಶಿವಮೊಗ್ಗ : ಶಿವಮೊಗ್ಗದಲ್ಲಿ ಯುವನಿಧಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆಯನ್ನು ನೀಡಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯನವರು, ಶಿವಮೊಗ್ಗ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಕೊಡ್ತೆವೆ ಎಂದಿದ್ದೆವು.
ಅಧಿಕಾರಕ್ಕೆ ಬಂದ ನಂತರ ಕೊಡ್ತೇವೆ. ಇವತ್ತು ನಿರುದ್ಯೋಗ, ರೈತರ ಸಮಸ್ಯೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ.
ಈ ಸಮಯದಲ್ಲಿ ಬಡವರರಿಗೆ, ಹಿಂದುಳಿದವರಿಗೆ ಆರ್ಥಿಕ ಶಕ್ತಿ ನೀಡುವ ಕೆಲಸ ಸರ್ಕಾರ ಮಾಡಿದೆ.
ಕೊಳ್ಳುವ ಶಕ್ತಿ ಹೆಚ್ಚಿಸಲು ಗ್ಯಾರಂಟಿ ಘೋಷಿಸಿ, ಕೊಟ್ಟಿದ್ದೇವೆ.
ಕೊಟ್ಟ ಮಾತಿನಂತೆ ನಾವು ನಡೆದುಕೊಂಡಿದ್ದೇವೆ. ಬಹಳ ಜನ ಯುವನಿಧಿ ಯಾಕೇ ಕೊಟ್ಟಿಲ್ಲ ಎಂದು ಕೇಳುತ್ತಿದ್ದರು.ಈ ಬಾರಿ ಪದವಿ, ಡಿಪ್ಲೊಮಾ ಮುಗಿಸಿ, ಆರು ತಿಂಗಳಾದರೂ ಕೆಲಸ ಸಿಗಲಿಲ್ಲ ಎಂದರೇ ಕೊಡ್ತೇವೆ ಎಂದಿದ್ದೇವೆ. ಹೀಗಾಗಿ ಈಗ ಯುವನಿಧಿಗೆ ಚಾಲನೆ ನೀಡುತ್ತಿದ್ದೇವೆ.
ಸುಮಾರು 130 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಓಡಾಡಿದ್ದಾರೆ. ಈ ಹಿಂದೆ ಯಾವ ಕಾಲದಲ್ಲೂ ಇದು ಆಗಿರಲಿಲ್ಲ…ಜೂನ್ 11 ರಂದು ಕೊಟ್ಟ ಶಕ್ತಿ ಯೋಜನೆ ಇಂದಿಗೂ ನಡೀತಾ ಇದೆ..ಗೃಹಜ್ಯೋತಿ ಯೋಜನೆಯಡಿ 1.65 ಕೋಟಿ ಕುಟುಂಬಕ್ಕೆ ಉಚಿತ ವಿದ್ಯುತ್ ನೀಡಿದ್ದೇವೆ. ಇನ್ನೂ ಅನ್ನಭಾಗ್ಯದ ವಿಚಾರದಲ್ಲೂ ಗೊಂದಲ ಮಾಡಿದ್ರು.. ಅಕ್ಕಿಯನ್ನು ಕೇಂದ್ರ ಕೊಡಲಿಲ್ಲ. ಮಾರುಕಟ್ಟೆಲೂ ಸಿಗಲಿಲ್ಲ..
ಹೀಗಾಗಿ ಐದು ಕೆಜಿ ಅಕ್ಕಿಯ ಹಣವನ್ನು ನೇರವಾಗಿ ಖಾತೆಗೆ ಹಾಕುತ್ತಿದ್ದೇವೆ…
1.18 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಇಂದು ಖಾತೆಗೆ ಹೋಗುತ್ತಿದೆ.ಯಾರಾದ್ರೂ 2 ಸಾವಿರ ರೂ. ಕೋಟ್ಟಿದ್ರೇನ್ರೀ…
ಇವತ್ತು ಯುವನಿಧಿ ಯೋಜನೆ ಗೆ ಚಾಲನೆ ನೀಡಿದ್ದೇವೆ.
ನಿರುದ್ಯೋಗ ಭತ್ಯೆಯ ಜೊತೆಗೆ ಕೌಶಲ್ಯ ತರಬೇತಿ ಕೊಡ್ತೇವೆ..
ಜೊತೆಗೆ ಉದ್ಯೋಗ ಮೇಳ ಕೂಡ ಸರ್ಕಾರ ಆಯೋಜನೆ ಸರ್ಕಾರ ಮಾಡುತ್ತೇ..ನಿರುದ್ಯೋಗದ ಸಮಸ್ಯೆ ಬಗೆಹರಿಸುವುದು ನಮ್ಮ ಉದ್ದೇಶ. ಉದ್ಯೋಗವಿಲ್ಲದೇ ಯುವ ಸಮೂದಾಯ ಭ್ರಮನಿರಶನ ಆಗಬಾರದು.
ವಿವೇಕಾನಂದ ಜನ್ಮದಿನವನ್ನು ಯುವದಿನವಾಗಿ ಆಚರಣೆ ಮಾಡ್ತೇವೆ..ಯುವದಿನದಂದೇ ಯುವನಿಧಿಯನ್ನು ಸರ್ಕಾರ ಕೊಟ್ಟಿದೆ.ಈಗಾಗಲೇ 70 ಸಾವಿರ ಜನರು ನೊಂದಣಿ ಮಾಡಿಕೊಂಡಿದ್ದಾರೆ. ಈ ವರ್ಷ 4.20 ಲಕ್ಷ ಜನರು ಡಿಗ್ರೀ ಹಾಗೂ ಪದವಿ ಮುಗಿಸಿದ್ದಾರೆ.ನೊಂದಣಿಯಾದ ಎಲ್ಲರಿಗೂ ಕೂಡ ಸರ್ಕಾರ ಹಣ ನೀಡುತ್ತೆ ಎಂದರು.
#Freedompark #Yuvanidhi #DKShivakumar #Sidaramayya #Shivamogga #Congress
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
C News TV Kannada News Online in cnewstv