Www.cnewstv.in / 12.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂಚಾರಿ ನಿಯಮವನ್ನು ಗಾಳಿಗೆ ತೂರಿದ ಯುವ ಕಾಂಗ್ರೆಸ್.
ಶಿವಮೊಗ್ಗ : ನಗರದಲ್ಲಿ ಈಗಾಗಲೇ ಹೆಲ್ಮೆಟ್ ರಹಿತ ಪ್ರಯಾಣ, ಫ್ರೀ ಲಿಫ್ಟ್ ಸೇರಿದಂತೆ ಸಂಚಾರಿ ನಿಯಮಗಳನ್ನು ಮೀರಿದವರಿಗೆ ಸಾವಿರ ಗಟ್ಟಲೆ ದಂಡವನ್ನು ವಿಧಿಸಲಾಗುತ್ತಿದೆ ಆದರೆ ಇಂದು ಈ ಎಲ್ಲಾ ನಿಯಮವನ್ನ ಗಾಳಿಗೆ ತೂರಿ ಯುವ ಕಾಂಗ್ರೆಸ್ ಬೈಕ್ ರ್ಯಾಲಿ ನಡೆಸಿದೆ.
ಜನವರಿ 12ರಂದು ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವಂತಹ ಯುವ ನಿಧಿ ಕಾರ್ಯಕ್ರಮದ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಬೈಕ್ ರ್‍ಯಾಲಿಯನ್ನು ಆಯೋಜನೆ ಮಾಡಲಾಗಿತ್ತು. ಈ ಬೈಕ್ ರಾಲಿಯಲ್ಲಿ ಯಾರೊಬ್ಬರೂ ಕೂಡ ಸಂಚಾರಿ ಪ್ರಮುಖ ನಿಯಮವಾದಂತಹ ಹೆಲ್ಮೆಟ್ ಅನ್ನು ಧರಿಸಿಯೇ ಇರಲಿಲ್ಲ.. ಸಚಿವರು ಮಂತ್ರಿಗಳು ಇದ್ದ ಈ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದು, ಕೇವಲ ಬೆರಳೆಣಿಕೆಯಷ್ಟು ಜನರು ಮಾತ್ರ ಹೆಲ್ಮೆಟ್ ಧರಿಸಿದ್ದಾರೆ.
ಜೀಬ್ರಾ ಲೈನ್ ಗಿಂತ ಸ್ವಲ್ಪ ಮುಂದೆ ಗಾಡಿ ನಿಲ್ಲಿಸಿದರು ಅಥವಾ ಫುಲ್ ಹೆಲ್ಮೆಟ್ ಹಾಕಿಲ್ಲ ಅಂದರೂ ಕೂಡ ನಮಗೆ ಸಾವಿರಗಟ್ಟಲೆ ದಂಡ ಹಾಕುವ ಪೊಲೀಸರು ಇವರಿಗೆ ಯಾಕೆ ದಂಡ ಹಾಕುತ್ತಿಲ್ಲ. ಜನಸಾಮಾನ್ಯರಿಗೆ ಒಂದು ಕಾನೂನು ರಾಜಕಾರಣಿಗಳಿಗೆ ಮತ್ತೊಂದು ಕಾನೂನ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಯುವಕರನ್ನು ಒಗ್ಗೂಡಿಸಿ, ಕಾರ್ಯಕ್ರಮದ ಆಯೋಜನೆ ಮಾಡಿದ ಯುವ ಕಾಂಗ್ರೆಸ್ ಒಂದಿಷ್ಟು ಸಂಚಾರಿ ನಿಯಮಗಳ ಬಗ್ಗೆ ಗಮನ ಹರಿಸಿದ್ದರೆ ಇದೊಂದು ಅದ್ಭುತವಾದ ಕಾರ್ಯಕ್ರಮ ಆಗುತ್ತಿತ್ತು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
#Freedompark #Yuvanidhi #DKShivakumar #Sidaramayya #Shivamogga #Congress
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv