Www.cnewstv.in / 12.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರು ಸೂಕ್ತ ಎಂಬುದು ಸಂತೋಷ ಉಂಟುಮಾಡಿದೆ – ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿ.
ಶಿವಮೊಗ್ಗ : ಫ್ರೀಡಂ ಪಾರ್ಕ್ ಗೆ ಅಲ್ಲಮ ಪ್ರಭು ಹೆಸರು ಸೂಕ್ತ ಎಂದು ಹೇಳಿದ ಸಿ ಎಂ ಸಿದ್ದರಾಮಯ್ಯನವರ ಮಾತು ಸಂತೋಷ ಉಂಟುಮಾಡಿದೆ ಎಂದು ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿ ಹೇಳಿದ್ದಾರೆ.
ಇಂದು ನಗರದ ಫ್ರೀಡಂ ಪಾರ್ಕ್ ನಲ್ಲಿ (ಹಳೆ ಜೈಲು ಆವರಣದಲ್ಲಿ) ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಇದೇ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಯಾದ ಮಧುಬಂಗಾರಪ್ಪನವರು ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭುಗಳ ಹೆಸರು ಇಡಬೇಕು ಎಂದು ವಿನಂತಿಸಿದರು. ನಂತರ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪನವರು ಹೋರಾಟಗಾರರಾದ ಚಂದ್ರಶೇಖರ್ ಆಜಾದ್ ರವರ ಹೆಸರು ಇಡಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದು ಹಳೇ ಜೈಲು ಆವರಣವಾಗಿತ್ತು. ನಾನು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಇದು ಹಳೆ ಜೈಲ್ ಅಗಿತ್ತು. ಅದನ್ನುಬೇರೆ ಕಡೆಗೆ ಬದಲಾಯಿಸಿ ಫ್ರೀಡಂ ಪಾರ್ಕ್ ಆಗಿ ಮಾಡಿದೆ. ಮಧು ಬಂಗಾರಪ್ಪನವರು ಹೇಳಿದಂತೆ ಈ ಜಾಗಕ್ಕೆ ಅಲ್ಲಮಪ್ರಭುಗಳ ಹೆಸರು ಸೂಕ್ತ. ಅಲ್ಲಮಪ್ರಭುಗಳು 12ನೇ ಶತಮಾನದವರು. ಅನುಭವ ಮಂಟಪದ ಅಧ್ಯಕ್ಷರಾಗಿದ್ದರು ಈಗಿನ ವಿಧಾನಸಭೆ, ವಿಧಾನ ಪರಿಷತ್ ಅಲ್ಲಿಂದಲೇ ಪ್ರಾರಂಭವಾಗಿದ್ದು. ಹಾಗಾಗಿ ಅವರ ಹೆಸರೇ ಸೂಕ್ತ ಎನ್ನುವುದು ಕೂಡ ನನ್ನ ಅಭಿಪ್ರಾಯ ಎಂದರು. ಸಿದ್ದರಾಮಯ್ಯನವರಾಗಿ ಮಾತುಗಳನ್ನ ಕೇಳುತ್ತಲೇ ಅಭಿಮಾನಿಗಳು ಚಪ್ಪಾಳೆ ಸುರಿಮಳೆಗೈದರು.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬೆಳ್ಳಿಗಾವಿಯಲ್ಲಿ ಜನಿಸಿದ ಮಹಾಶರಣ ಅಲ್ಲಮಪ್ರಭುದೇವರ ಹೆಸರನ್ನು ಶಿವಮೊಗ್ಗ ನಗರದ ಹಳೇ ಕಾರಾಗೃಹದ ಮೈದಾನಕ್ಕೆ ಇಡುವುದು ಸೂಕ್ತ ಎಂದು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿದ್ದು ನಮಗೆ ಅಪಾರ ಸಂತೋಷ ಉಂಟುಮಾಡಿದೆ. 2019ರ ಜನವರಿಯಲ್ಲಿ ಶಿವರಾತ್ರೀಶ್ವರರ 1059ನೆಯ ಜಯಂತಿ ಮಹೋತ್ಸವವನ್ನು ಆಚರಿಸುವಾಗ ಈ ಜಾಗಕ್ಕೆ ಅಲ್ಲಮಪ್ರಭು ಬಯಲು ಎಂದೇ ನಾಮಕರಣ ಮಾಡಿದ್ದು, ಅದನ್ನು ಹಾಗೆಯೇ ಕರೆಯಬೇಕೆಂದು ಶರಣ ಬಿ. ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯ ಬಹಿರಂಗ ಸಮಾರಂಭದಲ್ಲಿ ಸುತ್ತೂರು ಜಗದ್ಗುರುಗಳವರು ಸೂಚಿಸಿದ್ದರು. ಅಂದು ಎಲ್ಲ ಜನಸಮುದಾಯದ ಒಪ್ಪಿಯಿಂದ ಘೋಷಿಸಿದ್ದ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಅಧಿಕೃತವಾಗಿ ಘೋಷಿಸಿರುವುದು, 12ನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಂದ ಸ್ಥಾಪಿಸಲ್ಪಟ್ಟ ಜಗತ್ತಿನ ಪ್ರಜಾಪ್ರಭುತ್ವದ ತಂದೆಯೆಂದೇ ಖ್ಯಾತಿವೆತ್ತ ಅನುಭವ ಮಂಟಪಕ್ಕೆ ಸಂದ ಗೌರವವೆಂದು ಭಾವಿಸಿಕೊಂಡಿದ್ದೇವೆ.
ಕನ್ನಡದ ಪ್ರಥಮ ಅನುಭಾವಿ ಕವಿ, ಬಯಲು ತತ್ತ್ವದ ಪ್ರತಿಪಾದನೆ ಮಾಡಿದ ದಾರ್ಶನಿಕ, ಶೂನ್ಯಪೀಠದ ಪ್ರಥಮ ಅಧ್ಯಕ್ಷ, ಪ್ರಜಾಪ್ರಭುತ್ವದ ಮೊದಲ ಮಾದರಿ ಅನುಭವ ಮಂಟಪದ ಪ್ರಥಮ ಅಧ್ಯಕ್ಷ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬೆಳ್ಳಿಗಾವಿಯಲ್ಲಿ ಜನಿಸಿದ ಮಹಾಶರಣ ಅಲ್ಲಮಪ್ರಭುದೇವರ ಹೆಸರನ್ನು ಶಿವಮೊಗ್ಗ ನಗರದ ಹಳೇ ಕಾರಾಗೃಹದ ಮೈದಾನಕ್ಕೆ ಇಡುವುದು ಸೂಕ್ತ ಎಂದು ಘೋಷಿಸಿದ ನಾಡಿನ ಮುಖ್ಯಮಂತ್ರಿಗಳಾದ ಶರಣ ಸಿದ್ಧರಾಮಯ್ಯನವರಿಗೆ ಹಾಗು ಈ ವಿಷಯದ ಕುರಿತಾಗಿ ದನಿ ಎತ್ತಿ ಮುಖ್ಯಮಂತ್ರಿಗಳ ಗಮನಸೆಳೆದ ಸಚಿವರಾದ ಶರಣ ಮಧು ಬಂಗಾರಪ್ಪ ಅವರಿಗೆ ಜಿಲ್ಲೆಯ ಎಲ್ಲಾ ಮಠಾಧೀಶರ ಪರವಾಗಿ ಹಾಗು ಸಮಾಜ ಬಾಂಧವರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇವೆ.
-ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳವರು
ಶ್ರೀ ಬಸವತತ್ತ್ವ ಪೀಠ, ಚಿಕ್ಕಮಗಳೂರು
ಬಸವಕೇಂದ್ರ, ಶಿವಮೊಗ್ಗ.
#Freedompark #Yuvanidhi #DKShivakumar #Sidaramayya #Shivamogga #Congress
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv