Www.cnewstv.in / 12.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
” ಫ್ರೀಡಂ ಪಾರ್ಕ್ ” : ಚಂದ್ರಶೇಖರ್ ಆಜಾದ್ ಹೆಸರಿಗಿಂತ ಅಲ್ಲಮ ಪ್ರಭು ಹೆಸರೇ ಸೂಕ್ತ…
ಶಿವಮೊಗ್ಗ : ನಗರದ ಫ್ರೀಡಂ ಪಾರ್ಕ್ (ಹಳೆ ಜೈಲು ಆವರಣದಲ್ಲಿ) ಯುವನಿಧಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಇದೇ ವೇದಿಕೆಯಲ್ಲಿ ಫ್ರೀಡಂ ಪಾರ್ಕಿಗೆ ಯಾವ ಹೆಸರು ಇಡಬೇಕು ಎಂಬ ವಿಚಾರದಲ್ಲಿ ನಡೆದಂತಹ ಮಾತು ಹೆಚ್ಚು ಸ್ವಾರಸ್ಯದಾಯಕವಾಗಿತ್ತು.
ಜಿಲ್ಲಾ ಉಸ್ತುವಾರಿ ಮಂತ್ರಿಯಾದ ಮಧುಬಂಗಾರಪ್ಪನವರು ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭುಗಳ ಹೆಸರು ಇಡಬೇಕು ಎಂದು ವಿನಂತಿಸಿದರು. ನಂತರ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪನವರು ಹೋರಾಟಗಾರರಾದ ಚಂದ್ರಶೇಖರ್ ಆಜಾದ್ ರವರ ಹೆಸರು ಇಡಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದು ಹಳೇ ಜೈಲು ಆವರಣವಾಗಿತ್ತು. ನಾನು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಇದು ಹಳೆ ಜೈಲ್ ಅಗಿತ್ತು. ಅದನ್ನುಬೇರೆ ಕಡೆಗೆ ಬದಲಾಯಿಸಿ ಫ್ರೀಡಂ ಪಾರ್ಕ್ ಆಗಿ ಮಾಡಿದೆ. ಮಧು ಬಂಗಾರಪ್ಪನವರು ಹೇಳಿದಂತೆ ಈ ಜಾಗಕ್ಕೆ ಅಲ್ಲಮಪ್ರಭುಗಳ ಹೆಸರು ಸೂಕ್ತ. ಅಲ್ಲಮಪ್ರಭುಗಳು 12ನೇ ಶತಮಾನದವರು. ಅನುಭವ ಮಂಟಪದ ಅಧ್ಯಕ್ಷರಾಗಿದ್ದರು ಈಗಿನ ವಿಧಾನಸಭೆ, ವಿಧಾನ ಪರಿಷತ್ ಅಲ್ಲಿಂದಲೇ ಪ್ರಾರಂಭವಾಗಿದ್ದು. ಹಾಗಾಗಿ ಅವರ ಹೆಸರೇ ಸೂಕ್ತ ಎನ್ನುವುದು ಕೂಡ ನನ್ನ ಅಭಿಪ್ರಾಯ ಎಂದರು. ಸಿದ್ದರಾಮಯ್ಯನವರಾಗಿ ಮಾತುಗಳನ್ನ ಕೇಳುತ್ತಲೇ ಅಭಿಮಾನಿಗಳು ಚಪ್ಪಾಳೆ ಶಿಲೆಗಳ ಸುರಿಮಳೆಗೈದರು.
#Freedompark #Yuvanidhi #DKShivakumar #Sidaramayya #Shivamogga #Congress
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ
C News TV Kannada News Online in cnewstv