Breaking News

ಕೇವಲ ಉದ್ಯೋಗಕ್ಕಾಗಿ ಯೋಚನೆ ಮಾಡದೇ, ಉದ್ಯಮಿಯಾಗುವಂತೆ ಯೋಚಿಸಿ..

Www.cnewstv.in / 12.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕೇವಲ ಉದ್ಯೋಗಕ್ಕಾಗಿ ಯೋಚನೆ ಮಾಡದೇ, ಉದ್ಯಮಿಯಾಗುವಂತೆ ಯೋಚಿಸಿ..

ಶಿವಮೊಗ್ಗ : ಇಂದು ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಇವನಿಗೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಚಾಲನೆ ನೀಡಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ
ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ಬದುಕಿನಲ್ಲಿ ಇವತ್ತು ಬಹಳ ಸಂತೋಷದ ದಿನ. ಚುನಾವಣೆಗೂ ಮುನ್ನ ಸಿದ್ದರಾಮಯ್ಯ- ನಾನು ಮಾತುಕೊಟ್ಟಿದ್ದೆವು ಐದು ಗ್ಯಾರಂಟಿ ಕೊಡುತ್ತೇವೆ ಎಂದು ಅದರಂತೆ ಐದು ಗ್ಯಾರಂಟಿ ಕೊಟ್ಟಿರುವುದು ನಮ್ಮ ಭಾಗ್ಯ ಎಂದು ಭಾವಿಸಿದ್ದೇನೆ.

ಯುವನಿಧಿಯ ಯೋಜನೆ ಮೂಲಕ ಹಣ ಕೊಡಲ್ಲ‌. ತರಬೇತಿ ಕೊಡುತ್ತೇವೆ. ಕೌಶಲ್ಯ ತರಭೇತಿಯನ್ನು ಹಂತಹಂತವಾಗಿ ನೀಡುತ್ತೆವೆ. ಕೌಶಲ್ಯ ಪಡೆದವರು ಕೇವಲ ಉದ್ಯೋಗ ಪಡೆಯುವತ್ತ ಯೋಚನೆ ಮಾಡಬೇಡಿ..ಉದ್ಯೋಗ ಸೃಷ್ಟಿಸುವತ್ತಾ ಯೋಚಿಸಿ, ಹತ್ತಾರು ಜನರಿಗೆ ಕೆಲಸ ನೀಡುವಂತಾಗಬೇಕು.

ಪ್ರತಿದಿನ 60 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಓಡಾಡುತ್ತಿದ್ದಾರೆ. ಅದೇ ರೀತಿ ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯಿಂದ ಕೋಟ್ಯಾಂತರ ಜನ ಲಾಭ ಪಡೆದಿದ್ದಾರೆ.
ಯುವ ಸಮೂದಾಯ ವಿಶ್ವ ಮಟ್ಟದಲ್ಲಿ ಯೋಚನೆ ಮಾಡಬೇಕು. ಕೇವಲ ಉದ್ಯೋಗಕ್ಕಾಗಿ ಯೋಚನೆ ಮಾಡ್ದೇ, ಉದ್ಯಮಿಯಾಗುವಂತೆ ಯೋಚಿಸಿ. ಕುವೆಂಪುರವರ ಮಾತಿನಿಂತೆ ಟೀಕೆಗಳು ಸಾಯುತ್ತವೆ. ಕೆಲಸ ಉಳಿಯುತ್ತದೆ. ಎಲ್ಲರೂ ನೆನಪಿಡುವಂತೆ ಕೆಲಸ ಮಾಡಿ ಎಂದರು.

#Freedompark #Yuvanidhi #DKShivakumar #Sidaramayya #Shivamogga #Congress

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*