Breaking News

ಎಲ್ಲೆಲ್ಲೂ ಪ್ಲೆಕ್ಸ್..

Cnewstv / 11.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಎಲ್ಲೆಲ್ಲೂ ಪ್ಲೆಕ್ಸ್..

ಶಿವಮೊಗ್ಗ : ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳು, ವೃತ್ತಗಳೆಲ್ಲವೂ ಫ್ಲೆಕ್ಸಿನಿಂದ ತುಂಬಿ ಹೋಗಿದೆ. ಎಲ್ಲೆಲ್ಲೂ ಫ್ಲೇಕ್ಸ್ ಗಳೇ ರಾರಾಜಿಸುತ್ತಿದೆ.‌

ಜನವರಿ 12ರಂದು ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ನಡೆಯಲಿರುವಂತಹ ಯುವನಿಧಿ ಕಾರ್ಯಕ್ರಮದ ಪ್ರಯುಕ್ತ ನಗರದ ಪ್ರವಾಸಿ ಮಂದಿರ ರಸ್ತೆ, ಏರ್ಪೋರ್ಟ್ ರಸ್ತೆ, ಬಿಹೆಚ್ ರಸ್ತೆ ತುಂಬಾ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಪ್ಲೆಕ್ಸ್ ಗಳನ್ನು ಹಾಕಲು ಅನುಮತಿ ಪಡೆದುಕೊಳ್ಳಬೇಕು ಎನ್ನುವ ಮಾತುಗಳು ಫ್ಲೆಕ್ಸ್ಗಳ ಮಧ್ಯದಲ್ಲಿ ಕಣ್ಮರೆಯಾಗಿದೆ. ಇದೆಲ್ಲವೂ ಕೂಡ ಕೇವಲ ಮಂತ್ರಿಗಳು, ಸಚಿವರು ಬಂದು ಹೋಗುವ ರಸ್ತೆಗಳಲ್ಲಿ ರಾರಾಜಿಸುತ್ತಿದೆ.

ತಮ ನೆಚ್ಚಿನ ನಾಯಕರಿಗೆ ಸ್ವಾಗತ ಕೋರಿ ಫ್ಲೆಕ್ಸ್ ಗಳನ್ನು ಹಾಕಿರುವುದು ಸ್ವಾಗತ ಅರ್ಹ ಆದರೆ ಈ ಫ್ಲಕ್ಸ್ ಗಳನ್ನು ಆವೈಜ್ಞಾನಿಕವಾಗಿ ಅಳವಡಿಕೆ ಮಾಡಿರುವುದು ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿದೆ. ಇನ್ನು ಕೆಲವು ಪ್ಲೆಕ್ಸ್ ಗಳು
ಕಳಚಿ ಅರ್ಧ ರಸ್ತೆಗೆ ಬಿದ್ದಿದ್ದು, ಅಪಘಾತವಾಗುವ ಸಂಭವವಿದೆ. ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುಬೇಕು.‌ ಅಥವಾ ಫ್ಲೆಕ್ಸ್ ಅಳವಡೇಕೆಗೆ ಕಡಿವಾಣ ಹಾಕುವುದು ಉತ್ತಮ ಎನ್ನುವುದು ಜನರ ಅಭಿಪ್ರಾಯ.‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*