Breaking News

ಜ.15 ರಂದು ಬಿಡುಗಡೆಯಾಗಲಿದೆ “ಶಿವಮೊಗ್ಗ ಸಿರಿ ವೈಭವ” ಆಲ್ಬಂ ಬಿಡುಗಡೆ..

Cnewstv / 10.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಜ.15 ರಂದು ಬಿಡುಗಡೆಯಾಗಲಿದೆ “ಶಿವಮೊಗ್ಗ ಸಿರಿ ವೈಭವ” ಆಲ್ಬಂ ಬಿಡುಗಡೆ..

ಶಿವಮೊಗ್ಗ : ಪಂಡಿತ್ ಪ್ರೊಡಕ್ಷನ್ಸ್ ಚಲನಚಿತ್ರ ನಿರ್ಮಾಣ ಸಂಸ್ಥೆಯು ತಯಾರಿಸಿರುವ ” ಶಿವಮೊಗ್ಗ ಸಿರಿ ವೈಭವ ’ ಶೀರ್ಷಿಕೆಯ ವೀಡಿಯೋ ಆಲ್ಬಂನ ಬಿಡುಗಡೆ ಸಮಾರಂಭವು ಜ.15 ರ ಸಂಜೆ 5 ಗಂಟೆಗೆ ಕಂಟ್ರಿ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಲ್ಬಂನ ನಿರ್ದೇಶಕ ನಾಗರಾಜ್ ನೀಲ್ ತಿಳಿಸಿದರು. ಸಂಸ್ಥೆಯು ತನ್ನ ಮೊದಲ ಪ್ರಯತ್ನದಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಇಲ್ಲಿನ ಇತಿಹಾಸ, ವೈಶಿಷ್ಟ್ಯತೆಗಳನ್ನು ಕುರಿತು ಮಲೆನಾಡಿನ ನಾಡಗೀತೆ ಎನ್ನಬಹುದಾದ ವೀಡಿಯೋ ಆಲ್ಬಂನ್ನು ತಯಾರು ಮಾಡಿದೆ ಎಂದರು.

ಜೆ.ಆರ್ ಪಂಡಿತ್ ರವರ ನಿರ್ಮಾಣದಲ್ಲಿ ಕನ್ನಡದ ಹೆಸರಾಂತ ಚಿತ್ರಸಾಹಿತಿ, ಪ್ರೇಮಕವಿಯೆಂದೇ ಹೆಸರಾಗಿರುವ ಕೆ ಕಲ್ಯಾಣ್ ರವರ ಸಾಹಿತ್ಯ, ಗಾಯಕ ರಾಜೇಶ್ ಕೃಷ್ಣನ್ ರವರ ಕಂಠಸಿರಿಯಲ್ಲಿ ಮೂಡಿಬಂದಿರುವ ಹಾಡಿಗೆ ಶಿವಮೊಗ್ಗದವರೇ ಆದ ವಿಠಲ್ ರಂಗಧೋಳ್ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದರು.

ಜಿಲ್ಲಾದಿಕಾರಿ ಡಾ. ಸೆಲ್ವಮಣಿ ಆರ್. ಆಲ್ಬಂನ್ನು ಬಿಡುಗಡೆ ಮಾಡಲಿದ್ದು ವಿಶೇಷ ಆಹ್ವಾನಿತರಾಗಿ ಕೆ.ಕಲ್ಯಾಣ್, ಮುಖ್ಯ ಅತಿಥಿಯಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಇನ್ನಿತರರು ಭಾಗಿಯಾಗಲಿದ್ದಾರೆ ಸಂಜೆ ೭ ಗಂಟೆಗೆ ಪಂಡಿತ್ ಫಿಲ್ಸ್ ಯೂಟುಬ್ ಚಾನಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರದೀಪ್ ಆರ್ಯನ್, ಪ್ರೀತಮ್ ಉಪಸ್ಥಿತರಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ

Leave a Reply

Your email address will not be published. Required fields are marked *

*