Breaking News

ಯುವನಿಧಿ ಯೋಜನೆ ಯುವಕರ ಪಾಲಿಗೆ ಮಹತ್ವದ್ದಾಗಿದೆ – ಹೆಚ್ ಪಿ ಗಿರೀಶ್. ‌

Www.cnewstv.in / 10.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಯುವನಿಧಿ ಯೋಜನೆ ಯುವಕರ ಪಾಲಿಗೆ ಮಹತ್ವದ್ದಾಗಿದೆ – ಹೆಚ್ ಪಿ ಗಿರೀಶ್. ‌

ಶಿವಮೊಗ್ಗ : ಶಿವಮೊಗ್ಗದಲ್ಲಿ ಜ.12 ರಂದು ಯುವನಿಧಿ ಯೋಜನೆ ಚಾಲನೆಗೊಳ್ಳಲಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್ ಹೇಳಿದರು.

ರಾಜ್ಯ ಸರ್ಕಾರದ 4 ಗ್ಯಾರಂಟಿಗಳು ಈಗಾಗಲೇ ಯಶಸ್ವಿಯತ್ತ ಸಾಗಿ, ಸುಮಾರು 1.5 ಕೋಟಿ ಕುಟುಂಬಗಳ ತಲುಪಿದೆ. ಈಗ 5 ನೇ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಚಿವರುಗಳು ಉಪಸ್ಥಿತರಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್‌ರವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಲಿದೆ ಎಂದರು.

ಯುವನಿಧಿ ಯೋಜನೆ ಯುವಕರ ಪಾಲಿಗೆ ಮಹತ್ವದ್ದಾಗಿದೆ. ಅನೇಕ ಬಡ ಮತ್ತು ರೈತ ಕುಟುಂಬದ ವಿದ್ಯಾವಂತ ನಿರುದ್ಯೋಗಿಗಳು ಅರ್ಜಿ ಹಾಕಲು ಮತ್ತು ಸಂದರ್ಶನಕ್ಕೆ ಹೋಗಲು ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅವರಿಗೆ ಮಾಸಿಕ ಸಹಾಯ ಧನವಿದ್ದರೆ ಒಂದಿಷ್ಟು ಸಹಾಯವಾಗುತ್ತದೆ. ಈ ಯೋಜನೆಯ ಜಾರಿಗೆ ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡ ಒತ್ತಾಯ ಮಾಡಿದ್ದರು ಎಂದರು.

ಕೇಂದ್ರ ಸರ್ಕಾರ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಸುಮಾರು 14 ಕ್ಕೂ ಹೆಚ್ಚು ಸರ್ಕಾರಿ ಒಡೆತನದ ಉದ್ಯಮ ಸಂಸ್ಥೆಗಳು ಮುಚ್ಚಿಹೋಗಿವೆ. ಕಾರ್ಪೋರೇಟ್‌ಗಳ ಹಾವಳಿಯಿಂದ ಸರ್ಕಾರಿ ಉದ್ಯೋಗಗಳೇ ಇಲ್ಲವಾಗಿದೆ. ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಒಂದಿಷ್ಟಾದರು ನೆರವು ನೀಡುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.

ಸುಮಾರು ೪.೮೦ ಲಕ್ಷ ನಿರುದ್ಯೋಗಿಗಳಿದ್ದಾರೆ. ಈಗಾಗಲೇ ೩೨ ಸಾವಿರಕ್ಕೂ ಹೆಚ್ಚು ಅರ್ಜಿಗಳು ನೊಂದಣಿಯಾಗಿವೆ. ಶಿವಮೊಗ್ಗ ಜಿಲ್ಲೆಯಿಂದ ೪ ಸಾವಿರ ಅರ್ಜಿಗಳು ನೊಂದಣಿಯಾಗಿವೆ. ಇದೊಂದು ನಿರಂತರ ಯೋಜನೆಯಾಗಿದೆ. ಈ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ಸಿಗುತ್ತಿರುವುದು ಅತ್ಯಂತ ಸಂಭ್ರಮ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಪ್ರವೀಣ್ ಕುಮಾರ್, ಆರ್.ಕಿರಣ್, ಕುಮರೇಶ್, ಶರತ್‌ಮರಿಯಪ್ಪ, ಮಾಲತೇಶ್, ರಾಹುಲ್, ಪುಷ್ಪಕುಮಾರ್, ನಾಗರಾಜ್ ನಾಯ್ಕ, ರಾಜೇಶ್, ಸಂದೀಪ್, ಗುರುಪ್ರಸಾದ್, ಬಿ.ಲೋಕೇಶ್ ಸೇರಿದಂತೆ ಹಲವರಿದ್ದರು.

#youthcongress #congress #yuvanidhi #DKShivakumar #Sidaramayya #HPGirish

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಇದನ್ನು ಒದಿ..

Leave a Reply

Your email address will not be published. Required fields are marked *

*