Breaking News

ಯುವನಿಧಿ ಅರ್ಜಿ ಸಲ್ಲಿಕೆ ಹೇಗೆ ?? ಯಾರೆಲ್ಲಾ ಅರ್ಹರು ?? ಇಲ್ಲಿದೆ ಮಾಹಿತಿ..

Cnewstv / 08.01.2024 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಯುವನಿಧಿ ಅರ್ಜಿ ಸಲ್ಲಿಕೆ ಹೇಗೆ ?? ಯಾರೆಲ್ಲಾ ಅರ್ಹರು ?? ಇಲ್ಲಿದೆ ಮಾಹಿತಿ..

ಜನವರಿ 12 ರ ಸ್ವಾಮಿ ವಿವೇಕಾನಂದರ ಜಯಂತಿಯಂದು ಅರ್ಹರಿಗೆ ನಿರುದ್ಯೋಗ ಭತ್ಯೆ ಮೊತ್ತ ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ. ಈ ಯೋಜನೆಯ ಲಾಭವನ್ನು 5.29 ಲಕ್ಷ ಫಲಾನುಭವಿಗಳು ಪಡೆಯುವ ನಿರೀಕ್ಷೆ ಇದೆ. ಅನರ್ಹರು ನಿರುದ್ಯೋಗ ಭತ್ಯೆ ಪಡೆದರೆ ಅಷ್ಟೂ ಮೊತ್ತ ವಸೂಲಾತಿ ಜತೆಗೆ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವೀಧರರಾದವರಿಗೆ ಮಾಸಿಕ 3000 ರೂ., ಡಿಪ್ಲೊಮಾ ತೇರ್ಗಡೆಯಾದವರಿಗೆ 1500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ. ಫಲಾನುಭವಿಗಳು ಪ್ರತಿ ತಿಂಗಳ 25ರೊಳಗೆ ಸ್ವಯಂಘೋಷಣೆ ಮೂಲಕ ನಿರುದ್ಯೋಗ ಭತ್ಯೆ ಪಡೆಯಬಹುದು. ಸ್ವಂತ ಉದ್ಯೋಗ ಆರಂಭಿಸಿದರೆ, ಉದ್ಯೋಗ ಸಿಕ್ಕರೆ ಭತ್ಯೆ ಪಡೆಯುವಂತಿಲ್ಲ. ಐಟಿ- ಜಿಎಸ್‌ಟಿ ನೋಂದಣಿ, ಇಎಸ್‌ಐ- ಪಿಎಫ್‌ ಮಾಹಿತಿಯಿಂದಲೂ ಉದ್ಯೋಗ ಪಡೆದಿರುವ ಬಗ್ಗೆ ಮಾಹಿತಿ ಸಿಗಲಿದೆ. ಜತೆಗೆ ಶೇ.5ರಷ್ಟು ಭೌತಿಕ ಪರಿಶೀಲನೆಯೂ ನಡೆಯಲಿದೆ. ಅನರ್ಹರು ಪಡೆದರೆ ಅಷ್ಟು ಮೊತ್ತವನ್ನು ವಾಪಾಸ್‌ ಪಡೆಯುವ ಜತೆಗೆ ಕಾನೂನು ಕ್ರಮವೂ ಆಗಲಿದೆ.

ನಿಬಂಧನೆಗಳು…

ಪದವಿ ಇಲ್ಲವೇ ಡಿಪ್ಲೊಮಾ ಮುಗಿಸಿ ಆರು ತಿಂಗಳು ಕಳೆದರೂ ಉದ್ಯೋಗ ಲಭಿಸಿದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಈ ಉದ್ಯೋ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ.

ಭತ್ಯೆಯನ್ನು ನೇರ ಬ್ಯಾಂಕ್‌ ಖಾತೆಗೆ( DBT) ವರ್ಗ ಮಾಡಲಾಗುತ್ತದೆ.

ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು.

ನೀವು ನಿರುದ್ಯೋಗಿಗಳು ಎನ್ನುವುದಕ್ಕೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾಗುವವರಿಗೆ ದಂಡ ವಿಧಿಸಲಾಗುತ್ತದೆ.

ಅರ್ಹರು ಯಾರು..

ಇದು ಗರಿಷ್ಠ ಎರಡು ವರ್ಷದ ಅವಧಿಗೆ ಭತ್ಯೆಯನ್ನು ನೀಡುವ ಯೋಜನೆ.

2023ರ ಸಾಲಿನಲ್ಲಿ ಉತ್ತೀರ್ಣಯಾದವರು ಅರ್ಜಿ ಸಲ್ಲಿಸಲು ಅರ್ಹರು

ತೇರ್ಗಡೆಯಾದ ದಿನಾಂಕದಿಂದ 180 ದಿನಗಳ ಕಳೆದಿದ್ದರೂ ಉದ್ಯೋಗ ಸಿಗದೇ ಇದ್ದವರು

ಪದವೀಧರ ನಿರುದ್ಯೋಗಿಗಳು ವೃತ್ತಿಪರ ಕೋರ್ಸ್‌ ಮುಗಿಸಿದ ಯುವಕರು. ಇವರಿಗೆ 3 ಸಾವಿರ ರೂ. ಮಾಸಿಕ ಭತ್ಯೆ ಸಿಗಲಿದೆ.

ಇದೇ ಅವಧಿಯಲ್ಲಿ ಡಿಪ್ಲೋಮಾ ಪಾಸಾಗಿ ಉದ್ಯೋಗ ಸಿಗದವರು ಅರ್ಜಿ ಸಲ್ಲಿಸಬಹುದು. ಇವರಿಗೆ 1500 ರೂ. ನಿರುದ್ಯೋಗ ಭತ್ಯೆ ಮಾಸಿಕ ಸಿಗಲಿದೆ.

ವಿಡಿಯೋ ಮಾಹಿತಿ…

https://youtu.be/HzcZLme__LI?si=S6ZTgCb9IbXKwzWe

#ಯುವನಿಧಿ #yuvanidhi #Congressgovernment #DKShivakumar #Siddaramaya #Newsceam.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

ಇದನ್ನು ಒದಿ‌ ..

 

Leave a Reply

Your email address will not be published. Required fields are marked *

*