Breaking News

199 ಜನರಲ್ಲಿ ಪತ್ತೆಯಾದ ಜೆಎನ್.1 ವೈರಸ್…

Cnewstv / 02.01.2024 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

199 ಜನರಲ್ಲಿ ಪತ್ತೆಯಾದ ಜೆಎನ್.1 ವೈರಸ್…

ಬೆಂಗಳೂರು : ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಜೆಎನ್ 1 ವೈರಸ್​​ ಆರ್ಭಟ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 199 ಜನರಲ್ಲಿ ಜೆಎನ್.1 ದೃಢ ಪಟ್ಟಿದೆ.

ಜಿನೋಮಿಕ್ ಸ್ವೀಕೆನ್ಸ್ ವರದಿಯಲ್ಲಿ 199 ಮಂದಿಗೆ ಜೆಎನ್.1 ಸೋಂಕು ತಗುಲಿರೋದು ದೃಢಪಟ್ಟಿದೆ. ಇದುವರೆಗೆ ಜಿನೋಮ್‌ ಸೀಕ್ವೆನ್ಸ್‌ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ‌ ರವಾನಿಸಲಾಗಿತ್ತು. ಡಿಸೆಂಬರ್ 25ರಂದು ಹೊರ ಬಿದ್ದ ಮೊದಲ ರಿಪೋರ್ಟ್ ನಲ್ಲಿ 60 ಸ್ಯಾಂಪಲ್ ಗಳ ಪೈಕಿ 34 ಮಂದಿಗೆ ಜೆಎನ್ 1 ತಗುಲಿರೋದು ದೃಢಪಟ್ಟಿತ್ತು.

ನಿನ್ನೆ ಮತ್ತೆ 202 ಮಾದರಿಗಳ ವರದಿಯಲ್ಲಿ 165 ಮಂದಿಯಲ್ಲಿ ಜೆಎನ್1 ದೃಢಪಟ್ಟಿದೆ. ಇಲ್ಲಿಯವರೆಗೆ 199 ಜನರಿಗೆ ಜೆ.ಎನ್ 1 ವೈರಸ್ ಸೋಂಕು ತಗುಲಿದೆ. 28 ಜನರಿಗೆ ಎಕ್ಸ್‌ಬಿಬಿ ಉಪ ತಳಿ ಸೋಂಕು ಇದ್ದು, 35 ಮಂದಿಯಲ್ಲಿ ಇತರೆ ರೂಪಾಂತರಿ ಸೋಂಕು ಪತ್ತೆಯಾಗಿದೆ.

#Coronavirus #JN.1 #covid19 #Bangalore

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ

https://youtube.com/@cnewstv1051?si=f1zL8hKXiQCUP1lJ

ಶಿವಮೊಗ್ಗ : ನ್ಯಾಷನಲ್ ಸಂಸ್ಥೆ ಮೇಲೆ ಇಡಿ ದಾಳಿ…

Leave a Reply

Your email address will not be published. Required fields are marked *

*