ಜಿಲ್ಲಾಡಳಿತದಲ್ಲಿ ಸ್ನೇಹ ಸೌಹಾರ್ದಕ್ಕಾಗಿ ಕ್ರಿಕೆಟ್ ಪಂದ್ಯಾವಳಿ 2018 ಉದ್ಘಾಟನೆಯನ್ನು ಇಂದೂ ಬೆಳಿಗ್ಗೆ 9 ಗಂಟೆಗೆ ಇಂಜಿನಿಯರಿಂಗ್ ಕಾಲೇಜಿನ ಟರ್ಫ್ ಕ್ರೀಡಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ ಎ ದಯಾನಂದ್ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು..ಬಳಿಕ ಮಾತನಾಡಿದ ಅವರು ಕ್ರಿಕೆಟ್ ಒಗ್ಗಟ್ಟು ಮತ್ತು ಪ್ರೀತಿಯನ್ನು ಬೆಳೆಸುತ್ತದೆ ಕ್ರಿಕೆಟ್ನಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಮತ್ತು ಸಹಬಾಳ್ವೆ, ಪ್ರೀತಿ ಸ್ನೇಹ ಬೆಳೆಯುತ್ತದೆ. ಸದಾ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ನೌಕರರು ಒತ್ತಡದಿಂದ ದೂರವಿರಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಇದರಿಂದ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು .ಉದ್ಘಾಟನೆಯಲ್ಲಿ ಜಿ. ಪಂ. ಸಿಇಒ ಶಿವರಾಮೇಗೌಡ. ತಹಶೀಲ್ದಾರ್ ಸತ್ಯನಾರಾಯಣ. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ವಿ. ಶಿವಕುಮಾರ್. ಕ.ರಾ.ಸ.ನೌ. ಸಂಘದ ಅಧ್ಯಕ್ಷರಾದ ಸಿ.ಎಸ್ .ಷಡಾಕ್ಷರಿ ಸೇರಿದಂತೆ
ಮತ್ತಿತರರು ಉಪಸ್ಥಿತರಿದ್ದರು.

C News TV Kannada News Online in cnewstv