Breaking News

ಚಿಂತನ ಕಾರ್ತಿಕ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಸಮಾರಂಭ

Cnewstv / 16.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಚಿಂತನ ಕಾರ್ತಿಕ ಸಮಾರೋಪ ಸಮಾರಂಭ.‌

ಶಿವಮೊಗ್ಗ : ಬಸವಕೇಂದ್ರದ ವತಿಯಿಂದ ಡಿ.೧೮,೧೯ ಮತ್ತು ೨೦ರಂದು ಚಿಂತನ ಕಾರ್ತಿಕ ಸಮಾರೋಪ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ೨೮೬ನೇ ಶರಣ ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಸವಕೇಂದ್ರದ ಡಾ.ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ ಹೇಳಿದರು.

ಅವರು ಇಂದು ಬಸವಕೇಂದ್ರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿಂತನ ಕಾರ್ತಿಕದ ಸಮಾರೋಪ ಮತ್ತು ಪ್ರಶಸ್ತಿ ಸಮಾರಂಭ ಡಿ. ೧೮ ರಂದು ಆರ್‌ಟಿಓ ಕಚೇರಿ ರಸ್ತೆಯಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಸಂಜೆ ೬ಕ್ಕೆ ನಡೆಯುವುದು. ಇದರ ಸಾನಿಧ್ಯವನ್ನು ಬೆಕ್ಕಿನಕಲ್ಮಠ ಶ್ರೀಗಳಾದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು ಎಂದರು.

ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಕೆ. ಸಂಗಮೇಶ್, ಎಸ್.ರುದ್ರೇಗೌಡ, ಹೆಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ ಹಾಗೂ ಪ್ರಮುಖರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಡಾ.ಧನಂಜಯ ಸರ್ಜಿ, ನಾಗರಾಜ್ ಕಂಕಾರಿ, ಎಸ್.ಯೋಗೀಶ್, ಎಸ್.ಪಿ. ದಿನೇಶ್, ಅನಿತಾ ರವಿಶಂಕರ್, ಈ.ವಿಶ್ವಾಸ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ದೀನರಾಜ್ ಹೊನ್ನಾವಿಲೆ ಮುಂತಾದವರು ಉಪಸ್ಥಿತರಿರುವರು ಎಂದರು.

ಇದೇ ಸಂದರ್ಭದಲ್ಲಿ ನೇಗಿನಹಾಳದ ಲಿಂಗಾಯತ ಕ್ರಾಂತಿ ಮಾಸ ಪತ್ರಿಕೆ ಸಂಪಾದಕ ಯುವ ಪ್ರಶಸ್ತಿ ಪುರಸ್ಕೃತ ಶಿವನಂದ ಬಸವರಾಜ ಮೆಟ್ಯಾಲ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ ಆದ್ಯಂತ್ ನಂದೀಶ್ ಅವರನ್ನು ಸನ್ಮಾನಿಸಲಾಗುವುದು. ಸಹಕಾರ ರತ್ನ ಪ್ರಶಸ್ತಿ ಪಡೆದ ಹೆಚ್.ಎಲ್. ಷಡಾಕ್ಷರಿರವರನ್ನು ಅಭಿನಂದಿಸಲಾಗುವುದು ಇದೇ ದಿನ ವಚನ ನೃತ್ಯವನ್ನು ಆಯೋಜಿಸಲಾಗಿದೆ ಎಂದರು.

ಡಿ.೧೯ರAದು ಸಂಜೆ ೬.೩೦ಕ್ಕೆ ಬಸವಕೇಂದ್ರದಲ್ಲಿ ಗಣಪರ್ವ ಏರ್ಪಡಿಸಿದ್ದು ಇದರಲ್ಲಿ ಚೌಕಿ ಮಠ ಶ್ರೀಗಳಾದ ನೀಲಕಂಠ ಸ್ವಾಮಿ, ಸಿದ್ದರಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ, ಗರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮಿ, ವಿರಕ್ತಮಠದ ಚನ್ನಬಸವ ಸ್ವಾಮಿ, ತಂಗನಹಳ್ಳಿಯ ಬಸವಮಹಾಲಿಂಗಸ್ವಾಮಿ ಸಾನಿಧ್ಯ ವಹಿಸಲಿದ್ದು, ಸಮಾಜದ ಬಾಂಧವರು ತಮ್ಮ ತಮ್ಮ ಮನೆಗಳಿಂದ ರೊಟ್ಟಿ ಬುತ್ತಿ ತಂದು ಸಾಮೂಹಿಕ ಭೋಜನ ಮಾಡುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಪ್ರಮುಖರಾದ ರುದ್ರಮುನಿ ಸಜ್ಜನ್, ಎ.ಎಸ್.ಚಂದ್ರಶೇಖರ್, ಹೆಚ್.ಸಿ.ಯೋಗೀಶ್, ಪಿ.ಚಂದ್ರಪ್ಪ, ಆರ್.ಸ್ವಾಮಿ, ಚಂದ್ರಶೇಖರ್ ಇದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

 

ಇದನ್ನು ಒದಿ

ಜಿಲ್ಲಾ ನ್ಯಾಯಾಲಯದಲ್ಲಿ ಪ್ರೊಸೆಸ್ ಸರ್ವರ್-ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ.

 

 

Leave a Reply

Your email address will not be published. Required fields are marked *

*