ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಉಪ ಚುನಾವಣೆ- ೨೦೧೮ ಘೋಷಣೆಯಾಗಿರುವುದರ ಹಿನ್ನೆಲೆ ಕಾರಣ ನೀತಿ ಸಂಹಿತೆ ಪರಿಣಾಮ ರಾಜ್ಯ ಚುನಾವಣಾ ಆಯೋಗ ಸಲಹೆಯಂತೆ ಪಾಲಿಕೆ ಅಧಿಕಾರಿಗಳೇ ಸಾಂಸ್ಕೃತಿಕ ದಸರಾ ನಾಡ ಹಬ್ಬವನ್ನು ವೈಭವಯುತವಾಗಿ ಪರಂಪರೆಯ ಅನುಗುಣವಾಗಿ ಮಾಡಬಹುದಿತ್ತು. ಆದರೆ ಆವರು ನೀರಸ ದಸರಾ ಮಾಡುತ್ತಿರುವುದು ಶಿವಮೊಗ್ಗ ಜನತೆಗೆ ಅಸಮಾಧಾನ ಮತ್ತು ಬೇಸರ ತಂದಿದೆ. ಮಹಾನಗರ ಪಾಲಿಕೆ ನೂತನ ಆಯುಕ್ತೆ ಚಾರುಲತಾ ಸೋಮಲ್‌ರವರಿಗೆ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪರವರು ನೀತಿ ಸಂಹಿತೆ ಗಮನದಲ್ಲಿಟ್ಟುಕೊಂಡು ದಸರಾವನ್ನು ಅತ್ಯಂತ ಚೆನ್ನಾಗಿ ಮಾಡಬಹುದಾಗಿತ್ತು. ಶಿವಮೊಗ್ಗ ದಸರಾ ವೈಭವತೆಯನ್ನು ಹೆಚ್ಚಿಸಬಹುದಿತ್ತು. ಆದರೆ ದಸರಾ ಉತ್ಸವ ಚೆನ್ನಾಗಿ ಆಗದೇ ಇರುವ ಬಗ್ಗೆ ತುಂಬಾ ಬೇಸರವಾಗಿದೆ. ನೋವಾಗಿದೆ ಎಂದು ಮೊಬೈಲ್ ಮೂಲಕ ಮಾತನಾಡಿದ್ದಾರೆ.
ಇದಕ್ಕೆ ಚಾರುಲತಾರವರು ಚೆನ್ನಿಯವರ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರನ್ನು ದಾಖಲು ಮಾಡಿದ್ದಾರೆ. ಶಿವಮೊಗ್ಗ ನಗರದ ಚುನಾವಣಾಧಿಕಾರಿಯಾಗಿ ಹಾಗೂ ನಗರಪಾಲಿಕೆ ಆಯುಕ್ತರಾಗಿ ಎರಡೂ ಜವಾಬ್ದಾರಿ ನಿರ್ವಹಿಸುತ್ತಿರುವ ಆಯುಕ್ತರಿಗೆ ಒಬ್ಬ ನಾಗರೀಕನಾಗಿ, ಚುನಾಯಿತ ಪ್ರತಿನಿಧಿಯಾಗಿ ಮಾತನಾಡಿದಕ್ಕೆ ದೂರು ದಾಖಲು ಮಾಡಿದ್ದಾರೆ. ಈ ರೀತಿ ಮನೋಭಾವ ಇರುವ ಇವರು ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡುವುದು ಕಷ್ಟ ಸಾಧ್ಯ, ಜನರ ಮಾನಸಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ದೂರುಗಳನ್ನು ನೀಡುವುದು, ಸಮಸ್ಯೆಯನ್ನು ಯಾರಾದರೂ ಹೇಳಿದರೆ ಆವರ ಜೊತೆ ಸೌಜನ್ಯದಿಂದ ನಡೆದುಕೊಳ್ಳಲು ಇವರಿಗೆ ಸಾಧ್ಯವಿಲ್ಲ ಹೀಗಿರುವಾಗ ಇವರು ಮಹತ್ವಪೂರ್ಣವಾದ ವಿಜಯದಶಮಿಯನ್ನು ಮತ್ತು ನಗರದ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಹಾಗಾಗಿ ಅ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವ ಅಧಿಕಾರಿಯನ್ನು ಕೂಡಲೇ ನೇಮಿಸಬೇಕೆಂದು ಒತ್ತಾಯಿಸಿ ಶಿವಮೊಗ್ಗ ಬಿಜೆಪಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಪ್ರಭಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಪ್ರತಿಭಟನೆಯಲ್ಲಿ ಶಾಸಕರಾದ ಕೆ.ಎಸ್. ಈಶ್ವರಪ್ಪ, ಜಿಲ್ಲಾ ಜಿಜೆಪಿ ಆಧ್ಯಕ್ಷ ಎಸ್. ರುದ್ರೇಗೌಡ, ಪಾಲಿಕೆ ಸದಸ್ಯರಾದ ಎಸ್.ಎಸ್.ಚನ್ನಬಸಪ್ಪ, ಎಸ್. eನೇಶ್ವರ್ ದತ್ತಾತ್ರಿ ಮುಂತಾದವರು ಉಪಸ್ಥಿತರಿದ್ದರು.
- C NEWS Exclusive
- exclusive news
- exclusive news
C News TV Kannada News Online in cnewstv



