Cnewstv / 30.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಲಿಂಗ ಕಲ್ಲಿನದ್ದು ಆಗಿದೆ. ಅದು ಅಸೂಯೆ ಪಡುವುದಿಲ್ಲ, ದ್ವೇಷ ಸಾಧನೆ ಮಾಡುವುದಿಲ್ಲ – ಸಿದ್ಧಲಿಂಗ ಶಿವಾಚಾರ್ಯ
ಶಿವಮೊಗ್ಗ : ಗಾಳಿ ನೀರು ಬೆಳಕು ಎಲ್ಲರಿಗೂ ಒಂದೇ ಇರುವಾಗ ಮನುಷ್ಯನಲ್ಲಿ ಭೇದ ಭಾವವಿಲ್ಲ ಎಲ್ಲರೂ ಒಂದೇ ಎನ್ನುವುದೇ ಸದ್ಭರ್ಮ ಪೀಠ ಎಂದು ತಾವರೆಕರೆ,ಶಿಲಾಮಠದ ಷ||ಬ್ರ||ಡಾ||ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
ಹಿಂದಿನ ಕಾಲದಿಂದಲೂ ಉಜ್ಜಯಿನಿ ಪೀಠ ನ್ಯಾಯ ದೊರಕಿಸುವ ಪೀಠವಾಗಿದೆ. ಎಲ್ಲರೂ ಹಣವಂತನಾಗೂ ಎಂದು ಆರ್ಶೀವದಿಸಿದರೆ, ಈ ಪೀಠವು ನ್ಯಾಯವಂತನಾಗು, ನೀತಿವಂತನಾಗು, ಸಮಾಜಕ್ಕೆ ಕೊಡುಗೆಯಾಗಿ ಬಾಳು ಎಂದು ಆರ್ಶೀವದಿಸುತ್ತದೆ. ನಾವೇ ಚೆನ್ನಾಗಿಲ್ಲ ಎಂದಾದರೆ ಆತನಿಗೆ ಯಾವುದು ಚೆನ್ನಾಗಿರುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀಚಾರ್ಜ್ ಮಾಡಬೇಕಾಗುತ್ತದೆ. ಪ್ರತಿಯೊಬ್ಬರಲ್ಲೂ ಜ್ಞಾನದ ದಾಹ ಇರಬೇಕು. ಆಧ್ಯಾತ್ಮಿಕವಾಗಿ ರೀಚಾರ್ಜ್ವಾಗಬೇಕು. ಮತ್ತೊಬ್ಬ ಬಿದ್ದಾಗ ಮುಜುಗರ ಪಟ್ಟು ಆತನನ್ನು ಎಬ್ಬಿಸಿ ಸಾಂತ್ವನ ಹೇಳುವವನೇ ನಿಜವಾದ ಮನುಷ್ಯ ಎಂದರು.
ಮನುಷ್ಯನಾಗಿ ಮಾನವೀಯ ಮೌಲ್ಯಗಳನ್ನು ಪಾಲಿಸಬೇಕು. ಶಿವಲಿಂಗ ಕಲ್ಲಿನದ್ದು ಆಗಿದೆ. ಅದು ಅಸೂಯೆ ಪಡುವುದಿಲ್ಲ, ದ್ವೇಷ ಸಾಧನೆ ಮಾಡುವುದಿಲ್ಲ. ಅದಕ್ಕೆ ಹಿರಿಯರು ಕಲ್ಲಾಗಿ ಬಿಡು ಎನ್ನುತ್ತಾರೆ. ಕಲ್ಲಾದರೆ ನೀನು ದೇವರಾಗಬಹುದು ಎಂದು ಹೇಳುತ್ತಾರೆ. ಮನುಷ್ಯನಿಗೆ ಅಸೂಯೆ ಬಿಟ್ಟು ಮೊದಲು ಮಾನವೀಯತೆಯನ್ನು ರೂಢಿಸಿಕೊಂಡು ಬದುಕುವುದನ್ನು ಕಲಿಯಬೇಕು ಎಂದರು.
#Siddalingashivacharyaswamiji #ಉಜ್ಜಯಿನಿಪೀಠ #ಷ||ಬ್ರ||ಡಾ||ಅಭಿನವ ಸಿದ್ಧಲಿಂಗ ಶಿವಾಚಾರ್ಯ #ತಾವರೆಕರೆ,ಶಿಲಾಮಠ .
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments