Breaking News

ನೂತನ ರಾಜ್ಯಾಧ್ಯಕ್ಷರ ಭರ್ಜರಿ ಸ್ವಾಗತಕ್ಕೆ ಸಿಂಗಾರಗೊಂಡ ಶಿವಮೊಗ್ಗ..

Cnewstv / 28.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ನೂತನ ರಾಜ್ಯಾಧ್ಯಕ್ಷರ ಭರ್ಜರಿ ಸ್ವಾಗತಕ್ಕೆ ಸಿಂಗಾರಗೊಂಡ ಶಿವಮೊಗ್ಗ..

ಶಿವಮೊಗ್ಗ : ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರ ಸ್ವಾಗತಕ್ಕೆ ಶಿವಮೊಗ್ಗ ನಗರ ಮಧುವಿನಂತೆ ಸಿಂಗಾರಗೊಂಡಿದೆ. ನಗರದ ತುಂಬೆಲ್ಲ ಬಿಜೆಪಿಯ ಬಂಟಿಂಗ್ಸ್ ಗಳು ಬಿಜೆಪಿಯ ಹಿರಿಯ ನಾಯಕರು ಹಾಗೂ ನೂತನ ರಾಜ್ಯಾಧ್ಯಕ್ಷರ ಕಟ್ ಔಟ್ ಗಳು ರಾರಾಜಿಸುತ್ತಿದೆ..

ಬಿ ವೈ ವಿಜಯೇಂದ್ರರವರು ನಾಳೆ ಬೆಳಿಗ್ಗೆ 10 ಗಂಟೆಗೆ ತೆರೆದ ವಾಹನದಲ್ಲಿ ಸುಮಾರು 2000 ಕಾರ್ಯಕರ್ತರು ಬೈಕ್ ರ್ಯಾಲಿಯ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆಯ‌ ಮೂಲಕ ಪ್ರೇರಣಾ ಸಭಾಂಗಣದಲ್ಲಿ ಆಯೋಜಿಸಿರುವ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 6 ರಿಂದ 7ಸಾವಿರ ಜನ ಸೇರುವ ನಿರೀಕ್ಷೆಯಿದೆ.‌ ಅಭಿನಂದನಾ ಕಾರ್ಯಕ್ರಮದ ನಂತರ ನೂತನ ಅಧ್ಯಕ್ಷರಾದಂತಹ ವಿಜೇಂದ್ರ ರವರು ಜಿಲ್ಲೆಯ ಹಿರಿಯರ ಮನೆಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯಲಿದ್ದಾರೆ.

ಟಿ ಡಿ ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷರು.

#B.Y.Vijayendra #Shivamogga #Grandwelcome #PresidentofBharatiyaJanataParty #Karnataka #BYRagavendra #BSY

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*