Cnewstv / 21.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹೈದರಾಬಾದ್ ನಿಂದ ಶಿವಮೊಗ್ಗಕ್ಕೆ ಬಂದಿಳಿದ ವಿಮಾನ…ಮತ್ತಷ್ಟು ವ್ಯಾಪ್ತಿ ವಿಸ್ತರಿಸಿದ ಶಿವಮೊಗ್ಗ ಏರ್ಪೋರ್ಟ್..
ಶಿವಮೊಗ್ಗ : ಶಿವಮೊಗ್ಗ ಏರ್ಪೋರ್ಟ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಹೈದರಾಬಾದ್ ನಿಂದ ಶಿವಮೊಗ್ಗಕ್ಕೆ ವಿಮಾನ ಸಂಚಾರ ಆರಂಭವಾಗಿದ್ದು, ಇಂದು ಹೈದರಾಬಾದ್ ನಿಂದ ಬೆಳಿಗ್ಗೆ 9:35ಕ್ಕೆ ಹೊರಟ ವಿಮಾನ 10:35 ಕ್ಕೆ ಶಿವಮೊಗ್ಗದ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣವನ್ನು ತಲುಪಿದೆ.
ಸ್ಟಾರ್ ಏರ್ಲೈನ್ಸ್ ನಲ್ಲಿ ಬಂದ 83 ಪ್ರಯಾಣಿಕರನ್ನ ಸಂಸದ ಬಿ.ವೈ ರಾಘವೇಂದ್ರ ರವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಶಿವಮೊಗ್ಗದಿಂದ ಗೋವಾ ತಿರುಪತಿ ಹಾಗೂ ಹೈದರಾಬಾದಿಗೆ ಇಂದಿನಿಂದ ವಿಮಾನ ಸೇವೆ ಆರಂಭವಾಗಿದೆ. ಈ ಮೂಲಕ ಶಿವಮೊಗ್ಗ ಏರ್ಪೋರ್ಟ್ ಮತ್ತಷ್ಟು ನಗರಗಳಿಗೆ ವ್ಯಾಪ್ತಿ ವಿಸ್ತರಿಸಿದೆ.
#Shivamoggaairport #BYRaghavendra #StarAirlines #Shimoga #Hyderabad #Goa #trip
# ಸ್ಟಾರ್ ಏರ್ಲೈನ್ಸ್ #ShivamoggaDomesticAirport
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv