Breaking News

ಬಿ ವೈ ವಿಜಯೇಂದ್ರರವರಿಗೆ ದೀಪಾವಳಿಯ ಬಂಪರ್ ಗಿಫ್ಟ್..

Cnewstv / 10.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬಿ ವೈ ವಿಜಯೇಂದ್ರರವರಿಗೆ ದೀಪಾವಳಿಯ ಬಂಪರ್ ಗಿಫ್ಟ್..

ಬೆಂಗಳೂರು : ಮಹತ್ವದ ರಾಜಕೀಯ ಬೆಳವಣಿಗೆ ಇಂದು ನಡೆದಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರರವರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಬಿಜೆಪಿ ಅವರು ಆಯ್ಕೆಯಾಗಿದ್ದಾರೆ.

ಬಿ ವೈ ವಿಜಯೇಂದ್ರ ಅವರಿಗೆ ದೀಪಾವಳಿಯ ಬಂಪರ್ ಗಿಫ್ಟ್ ದೊರೆತಿದೆ.‌ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದ ರವರು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕೃತ ಆದೇಶವನ್ನು ನೀಡಿದ್ದಾರೆ.

ಲೋಕಸಭಾ ಚುನಾವಣೆ ಸಮೀಪದಲ್ಲಿಯೇ ಈ ರಾಜಕೀಯ ಬದಲಾವಣೆ ಹೊಸ ಸಂಚಲನವನ್ನು ಮೂಡಿಸಿದೆ. ಹೊಸ ಅಧಿಕಾರದ ಜೊತೆಯಲ್ಲಿಯೇ ಬಿ ವೈ ವಿಜೇಂದ್ರರವರಿಗೆ ಸಾಕಷ್ಟು ಜವಾಬ್ದಾರಿಗಳು, ಸವಾಲುಗಳು ಎದುರಾಗಲಿದೆ.

ಬಿ ಎಸ್ ವೈ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದ್ದು, ಬಿ ವೈ ವಿಜೇಂದ್ರ ರವರ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

#KarnatakaBJPPresident #BYVijendra #KarnatakastateBJPPresident #BSYsonVijendra appointedasKarnatakaBJPPresident #BSyediyurappa

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*