Breaking News

ಯುವಕರ ನಡುವೆ ಗಲಾಟೆ.. ಮೂವರ ಮೇಲೆ ಚಾಕುವಿನಿಂದ ಹಲ್ಲೆ..

Cnewstv / 10.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಯುವಕರ ನಡುವೆ ಗಲಾಟೆ.. ಮೂವರ ಮೇಲೆ ಚಾಕುವಿನಿಂದ ಹಲ್ಲೆ..

ಶಿವಮೊಗ್ಗ : ಯುವಕರ ನಡುವೆ ವೈಯಕ್ತಿಕ ಕಾರಣಕ್ಕೆ ಗಲಾಟೆಯಾಗಿದ್ದು, ಮೂವರಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಹೌದು ನಿನ್ನೆ ರಾತ್ರಿ ಜೆಪಿ ನಗರದ ಬಳಿ ಈ ಘಟನೆ ನಡೆದಿದೆ. ಕಳೆದ 15 ದಿನಗಳ ಹಿಂದೆ ಕೂಡ ಗಲಾಟೆ ಮಾಡಿಕೊಂಡಿದ್ದರು..

ಹಲ್ಲೆಗೊಳಗಾದವರನ್ನು ಶಿವಮೊಗ್ಗದ ಟಿಪ್ಪು ಟಿಪ್ಪು ನಗರದ ಸಮೀರ್ (23) ಫರಾಜ್ (24) ಮೇಲೆ ಹಲ್ಲೆ ನಡೆಸಿದ್ದು ಗಾಯಗಳಾಗಿದೆ ಹಾಗೂ ಜೆಪಿ ನಗರದ ಮೊಹಮ್ಮದ್ ಖಾಲಿದ್ ಅಲಿಯಾಸ್ ಸೋನು (19) ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ

ಜೆಪಿ ನಗರದ ಜಂಡೆಕಟ್ಟೆ ಬಳಿ ಕಾರ್ಯಕ್ರಮದಲ್ಲಿ ಯುವಕರು ಭಾಗವಹಿಸಿದ್ದರು ಈ ವೇಳೆ ಸಮೀರ್, ಫರಾಜ್, ಸಲ್ಲು, ಸೆಬು, ಸೋನು, ಕತ್ರು ಟೀಮ್ ನಡುವೆ ನೆನ್ನೆ ರಾತ್ರಿ ಗಲಾಟೆ ನಡೆದಿದೆ. ಪರಸ್ಪರ ಗುರಾಯಿಸಿಕೊಂಡು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ.

ಗಾಯಾಳುಗಳನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ವೈಯಕ್ತಿಕ ಕಾರಣಕ್ಕೆ ಯುವಕರ ನಡುವೆ ಗಲಾಟೆ ನಡೆದಿದ್ದು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

#Crime #KnifeStab #shivamogga #JPnagara #thunganagarapolicestation #midnight

Leave a Reply

Your email address will not be published. Required fields are marked *

*