Cnewstv / 08.11.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬಸ್ ಸ್ಟ್ಯಾಂಡ್ ರಾಘು.. ಅಲ್ಲ ಏರ್ಪೋರ್ಟ್ ರಾಘು..
ಶಿವಮೊಗ್ಗ : ಸಂಸದ ಬಿ ವೈ ರಾಘವೇಂದ್ರ ರವರು ಇನ್ನು ಮುಂದೆ ಬಸ್ಟಾಂಡ್ ರಾಘು ಅಲ್ಲ, ಏರ್ಪೋರ್ಟ್ ರಾಘು ಎಂದು ಸಾಗರ ಶಾಸಕ ಬೇಲೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ಎಂ ಪಿ ರಾಘವೇಂದ್ರ ಅವರು ನಾಲ್ಕು ವರ್ಷಗಳ ಕಾಲ ಸುಮ್ಮನಿರುತ್ತಾರೆ. 4 ವರ್ಷದ ನಂತರ ನಾನೊಬ್ಬರೇ ಟವರ್ ತಂದೆ, ಬ್ರಿಡ್ಜ್ ಗಳನ್ನು ತಂದೆ ಎಂದು ಹೇಳಿಕೆ ನೀಡುತ್ತಾರೆ.
ಏರ್ಪೋರ್ಟ್ ಯಾವ ಸರ್ಕಾರ ಅಧಿಕಾರದಲ್ಲಿರುತ್ತದೆಯೋ ಆ ಸರ್ಕಾರ ತಂದಿದೆ ಯಡಿಯೂರಪ್ಪನವರ ಸಮಯದಲ್ಲಿ ಅವರ ಸರ್ಕಾರ ಅಧಿಕಾರದಲ್ಲಿದ್ದು ಏರ್ಪೋರ್ಟ್ಅನ್ನ ತಂದಿದ್ದಾರೆ. ಇದರಲ್ಲಿ ಏನು ಅತಿಶಯೋಕ್ತಿ ಇಲ್ಲ. ಶಿವಮೊಗ್ಗ ತುಮಕೂರು ರಸ್ತೆ ಕಾಮಗಾರಿ ಏನ್ ಅಯ್ತು ??
ನಾನು ಬಸ್ ಸ್ಟ್ಯಾಂಡ್ ರಾಘು ಎಂದು ಹೆಸರು ಇಟ್ಟಿದ್ದೆ ಆದರೆ ಈಗ ಅವರೇ ಏರ್ಪೋರ್ಟ್ ರಾಘು ಎಂದು ಹೇಳಿ ಎಂದು ಹೇಳುತ್ತಿದ್ದರಂತೆ. ಏರ್ಪೋರ್ಟ್ ಏನೇ ಇದ್ದರೂ ಯಡಿಯೂರಪ್ಪನವರದು ರಾಘು ಏನೇ ಇದ್ದರೂ ಬಸ್ ಸ್ಟ್ಯಾಂಡ್ ರಾಘುನೇ..
– ಬೇಲೂರು ಗೋಪಾಲಕೃಷ್ಣ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv