Www.cnewstv.in / 07.11.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮುಂಜಾನೆಯಿಂದಲೇ ವರುಣನ ಅಬ್ಬರ.. ರಾಜ್ಯಾದ್ಯಂತ ಭರ್ಜರಿ ಮಳೆ ಮುನ್ಸೂಚನೆ..
ಶಿವಮೊಗ್ಗ : ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದ್ದು ಮುಂದಿನ ಮೂರು ದಿನ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಷ್ಟು ದಿನ ಬಿಸಿಲಿನಿಂದ ಹೈರಾನಾಗಿದ್ದ ಜನರಿಗೆ ವರುಣ ತಂಪೆರದಿದ್ದಾನೆ. ಕಳೆದ ಭಾನುವಾರ ಕೂಡ ನಗರದಲ್ಲಿ ಭಾರಿ ಮಳೆಯಾಗಿದ್ದು, ಕೆಲ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಇಂದು ಬೆಳಗ್ಗಿನಿಂದ ಗುಡುಗು ಮಿಂಚು ಸಹಿತ ವರುಣಾ ಅಬ್ಬರಿಸುತ್ತಿದ್ದಾನೆ.

ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು ಎಲ್ಲೋ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ನ 8, 9 ರಂದು ರಾಜ್ಯಾದ್ಯಂತ ಹಲವು ಕಡೆ ಉತ್ತಮ ಮಳೆ ಆಗಲಿದೆ. ನವೆಂಬರ್ 10 ರಂದು ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಲಿದ್ದು, ನವೆಂಬರ್ 11ರಿಂದ ರಾಜ್ಯದಲ್ಲಿ ಮತ್ತೆ ಬಹುತೇಕ ಮಳೆ ಮಾಯವಾಗಲಿದೆ. ನ 12, 13, 14 ರಂದು ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಮಳೆಯಾಗುವುದಿಲ್ಲ ಎಂದು ಉಪಗ್ರಹ ಆಧಾರಿತ ಮಳೆ ನಕ್ಷೆಯಲ್ಲಿ ತಿಳಿಸಲಾಗಿದೆ. ನ 15 ರಂದು ಕರ್ನಾಟಕದ ದಕ್ಷಿಣ ಭಾಗದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಉಲ್ಲೇಖಿಸಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv