Breaking News

ಬೈಕ್ ಗೆ ಅಡ್ಡಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ, ಭೀಕರ ಅಪಘಾತ. ಗಂಡ ಸ್ಥಳದಲ್ಲೇ ಸಾವು- ಪತ್ನಿಗೆ ಗಂಭೀರ ಗಾಯ.

Www.cnewstv.in / 07.11.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬೈಕ್ ಗೆ ಅಡ್ಡಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ, ಭೀಕರ ಅಪಘಾತ. ಗಂಡ ಸ್ಥಳದಲ್ಲೇ ಸಾವು- ಪತ್ನಿಗೆ ಗಂಭೀರ ಗಾಯ.

ಶಿವಮೊಗ್ಗ : ಬೈಕ್ ಗೆ ಅಡ್ಡಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ, ಭೀಕರ ಅಪಘಾತವಾಗಿದ್ದು, ಗಂಡ ಸ್ಥಳದಲ್ಲೇ ಸಾವನಪ್ಪಿದ್ದು, ಪತ್ನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ.

ಮೃತ ದುರ್ದೈವಿ ಶಿಕಾರಿಪುರದ ಇಟ್ಟಿಗೆಹಳ್ಳಿ ಗ್ರಾಮದ ಗಣೇಶ್(32) ಎಂದು ಗುರುತಿಸಲಾಗಿದೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಯರೆಕಟ್ಟೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು,ಅಪಘಾತದ ರಭಸಕ್ಕೆ ಗಂಡ ಸ್ಥಳದಲ್ಲೇ ಸಾವನಪ್ಪಿದ್ದು, ಪತ್ನಿಗೆ ಗಂಭೀರ ಗಾಯವಾಗಿದೆ.

ಪತ್ನಿ ರಂಜಿತಾರನ್ನು ಕೆಲಸಕ್ಕೆ ಬಿಡಲು ಕರೆದೊಯ್ಯುತ್ತಿದ್ದಾಗ, ಯರೆಕಟ್ಟೆ ಗ್ರಾಮದ ಭೂತಪ್ಪನ ಕಟ್ಟೆ ಬಳಿ ಬರುವಾಗ ಬೈಕ್ ಗೆ ಅಡ್ಡ ಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ, ರಸ್ತೆ ಬದಿಯ ಕಟ್ಟೆಗೆ ಬೈಕ್ ಢಿಕ್ಕಿಯಾಗಿದೆ.‌ ಪತಿ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರಾರೆ. ರಂಜಿತಾ (27) ಕಾಲು- ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*