Breaking News

ರೈಲ್ವೆ ನಿಲ್ದಾಣದ ಹತ್ತಿರ ದೊರೆತ ಅನುಮಾನಾಸ್ಪದ ಬಾಕ್ಸ್. ರಾತ್ರಿ ಇಡೀ ನಡೆದ ಕಾರ್ಯಾಚರಣೆ.. ಬಾಕ್ಸ್ ಒಳಗೆ ಇದ್ದಿದ್ದೇನು ??

Www.cnewstv.in / 06.11.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರೈಲ್ವೆ ನಿಲ್ದಾಣದ ಹತ್ತಿರ ದೊರೆತ ಅನುಮಾನಾಸ್ಪದ ಬಾಕ್ಸ್. ರಾತ್ರಿ ಇಡೀ ನಡೆದ ಕಾರ್ಯಾಚರಣೆ.. ಬಾಕ್ಸ್ ಒಳಗೆ ಇದ್ದಿದ್ದೇನು ??

ಶಿವಮೊಗ್ಗ : ನ.4 ರಂದು ಶಿವಮೊಗ್ಗ ರೈಲ್ವೆ ನಿಲ್ದಾಣದ ಹತ್ತಿರ ಅನಾಮದೇಯ ಬಾಕ್ಸ್ ಪತ್ತೆಯಾಗಿದ್ದು, ಎಲ್ಲರೂ ಆತಂಕವನ್ನು ಮೂಡಿಸಿತ್ತು. ರೈಲ್ವೆ ನಿಲ್ದಾಣದ ಪಾರ್ಕಿಂಗ್ ಹತ್ತಿರ ಎರಡು ಬಾಕ್ಸ್ ನ್ನು ಗೋಣಿ ಚೀಲದಿಂದ ಸುತ್ತಲಾಗಿತ್ತು ಅದರ ಮೇಲೆ ಮೇಡ್ ಇನ್ ಬಾಂಗ್ಲಾದೇಶ ಎಂದು ಬರೆಯಲಾಗಿತ್ತು ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.‌ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ಆರಂಭಿಸಿದರು.‌ ಇದರಲ್ಲಿ ಸ್ಪೋಟಕ ವಸ್ತುಗಳು ಇರಬಹುದು ಎಂಬ ಶಂಕೆಯಿಂದಾಗಿ ಬೆಂಗಳೂರಿನಿಂದ ತಜ್ಞರ ತಂಡವನ್ನು ಕರೆಸಲಾಯಿತು. ನಂತರ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದ ಕಾರ್ ಮಾಲೀಕ ಹಾಗೂ ಓರ್ವ ನನ್ನು ವಿಚಾರಣೆ ನಡೆಸಿದ್ದರೂ ಎಂದು ಹೇಳಲಾಗಿದೆ.‌

ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಶಿವಮೊಗ್ಗಕ್ಕೆ ರಾತ್ರಿ ಆಗಮಿಸಿದ್ದು, ತಪಾಸನೆ ಆರಂಭಿಸಿದ್ದರು. ಬಾಂಬ್ ಸೂಟ್ ಧರಿಸಿದ ಸಿಬ್ಬಂದಿಗಳು ಮೂರು ಬಾರಿ ಬಾಕ್ಸ್ ಸಮೀಪ ಆಗಮಿಸಿ ವಿವಿಧ ಉಪಕರಣಗಳನ್ನು ಉಪಯೋಗಿಸಿ ಪರಿಶೀಲನೆ ನಡೆಸಿದ್ದರು ಆದರೆ ರಾತ್ರಿ ಜೋರು ಮಳೆ ಆರಂಭವಾಗುತ್ತಿದ್ದರಿಂದ ಪರಿಶೀಲನೆ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು.

ತಡರಾತ್ರಿ 2.40 ರ ಸುಮಾರಿಗೆ ಮೊದಲನೇ ಪೆಟ್ಟಿಗೆಯನ್ನು ಸ್ಪೋಟಕ ದಿಂದ ಸ್ಪೋಟಿಸಲಾಯಿತು. ನಂತರ ಎರಡನೇ ಪೆಟ್ಟಿಗೆಯನ್ನ 3.24 ರ ಸುಮಾರಿಗೆ ಸ್ಪೋಟಿಸಲಾಯಿತು. ಎರಡು ಪೆಟ್ಟಿಗೆಯೊಳಗೆ ಬಿಳಿಯ ಪುಡಿಗಳಿದ್ದು ಅದನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ನಂತರ ಅದು ಯಾವ ಪುಡಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ..

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*