Www.cnewstv.in / 05.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಿಕ್ಕಿಂನಲ್ಲಿ ಸಿಲುಕಿರುವ ಯೋಧರು ಮತ್ತು ಪ್ರವಾಸಿಗರು ಸುರಕ್ಷಿತವಾಗಿ ಬರಲಿ..
ಶಿವಮೊಗ್ಗ : ಸಿಕ್ಕಿಂನಲ್ಲಿ ರಾಜ್ಯದಲ್ಲಿ ಆಗುತ್ತಿರುವಂತಹ ಮೆಗಾ ಸ್ಫೋಟ ಹಾಗೂ ಪ್ರವಾಹದಿಂದ ನಮ್ಮ ಭಾರತೀಯ 22 ಯೋಧರು ಹಾಗೂ 120 ಸ್ಥಳೀಯ ಜನರು ನಾಪತ್ತೆಯಾಗಿರುತ್ತಾರೆ 3000 ಕೂ ಹೆಚ್ಚು ಪ್ರವಾಸಿಗಳು ಸಿಕ್ಕಿಂನ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುತ್ತಾರೆ ಎಲ್ಲರೂ ಸುರಕ್ಷಿತವಾಗಿ ವಾಪಸಾಗಲಿ ಎಂದು ಇಂದು ಶಿವಮೊಗ್ಗ ನಗರದ ರಾಮಣ್ಣ ಶೆಟ್ಟಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ತಾಂದಲೆ, ಕೆಪಿಸಿಸಿ ಕಾರ್ಯದರ್ಶಿಗಳಾದ ದೇವೇಂದ್ರಪ್ಪ, ಹಾಗೂ ಎಸ್ ಪಿ ಶೇಷಾದ್ರಿ, ಎನ್ ಎಸ್ ಯು ಐ ನ ರಾಜ್ಯ ಕಾರ್ಯದರ್ಶಿಯಾದ ಬಾಲಾಜಿ, ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷರಾದ ಅರ್ಜುನ್ ವಿ ಪಂಡಿತ್, ಕಾರ್ಮಿಕ ಘಟಕದ ನಗರಾಧ್ಯಕ್ಷರಾದ ಗಿರೀಶ್,ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾದ ಪುರ್ಲೆ ಮಂಜು, ಮಂಜುನಾಥ್,ಸಂದೀಪ್ ಅಟಕ್, ಭರತ್, ದರ್ಶನ್, ಐ ಏನ್ ಟಿ ಯು ಸಿ ಯ ಸ್ವರೂಪ್,ಪುನೀಲ್, ಅನಿರುದ್ಧ, ಅಭಿಷೇಕ್,ಯಶವಂತ್, ದುಮ್ಮಳ್ಳಿ ರಾಜಣ್ಣ ಹಾಗೂ ಇನ್ನಿತರರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments