Www.cnewstv.in / 02.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಡೀ ನಗರದ ತುಂಬಾ ಕೈಯಲ್ಲಿ ತಲವಾರುಗಳನ್ನು ಇಟ್ಟುಕೊಂಡು ಸಾಗಿದ್ದಾರೆ.
ಶಿವಮೊಗ್ಗ : ಶಿವಮೊಗ್ಗದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಡೀ ನಗರದ ತುಂಬಾ ಕೈಯಲ್ಲಿ ತಲವಾರುಗಳನ್ನು ಇಟ್ಟುಕೊಂಡು ಸಾಗಿದರು. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕಪ್ಪು ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಂಡು ಮನೆಗಳಿಗೆ ನುಗ್ಗಿ ನುಗ್ಗಿ ಹೊಡೆದಿದ್ದಾರೆ ಎಂದು
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ರೋಶದಿಂದ ಗುಡುಗಿದರು.
ಮುಸ್ಲಿಮರು ಮೆರವಣಿಗೆ ಹಿನ್ನೆಲೆಯಲ್ಲಿ ಇಡೀ ನಗರದ ತುಂಬಾ ಕೈಯಲ್ಲಿ ತಲವಾರುಗಳನ್ನು ಇಟ್ಟುಕೊಂಡು ಸಾಗಿದರು. ಅನೇಕ ಕಡೆ ತಲವಾರುಗಳನ್ನೇ ತೂಗು ಹಾಕಿದ್ದರು. ತಲವಾರು ಇಟ್ಟುಕೊಂಡು ಯಾರನ್ನು ಇವರು ಹೆದರಿಸುತ್ತಿದ್ದಾರೆ. ಹಿಂದೂ ಸಮಾಜಕ್ಕೆ ಎಚ್ಚರಿಕೆ ಕೊಡುತ್ತಿದ್ದಾರೆಯೇ. ತಲವಾರು ಪ್ರದರ್ಶನ ಬೇಕಿತ್ತಾ. ಕೋಲಾರದಲ್ಲೂ ಇದೇ ರೀತಿ ಇತ್ತು. ಅಲ್ಲಿನ ಸಂಸದರು ಈ ತಲವಾರುಗಳನ್ನು ತೆಗೆಸಿದ್ದರು. ಶಿವಮೊಗ್ಗದಲ್ಲಿ ಏಕೆ ತೆಗೆಯಲಿಲ್ಲ. ತಲವಾರು ಹಿಡಿಯಲು ಅವಕಾಶ ಕೊಟ್ಟಿದ್ದಾದರೂ ಏಕೆ, ಮೊದಲು ಅವರನ್ನು ಬಂಧಿಸಬೇಕಿತ್ತು ಎಂದರು.
ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಲಿ.
ರಾಗಿಗುಡ್ಡದಲ್ಲಿ ಹಿಂದೂಗಳ ಮನೆ ಮೇಲೆ ವ್ಯಕ್ತಿಗಳ ಮೇಲೆ ಹಲ್ಲೆಯಾಗಿರುವುದನ್ನು ನೋಡಿದರೆ ಆಕ್ರೋಶವಾಗುತ್ತದೆ.
ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕಪ್ಪು ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಂಡು ಮನೆಗಳಿಗೆ ನುಗ್ಗಿ ನುಗ್ಗಿ ಹೊಡೆದಿದ್ದಾರೆ. ಕೇವಲ ಹಿಂದೂಗಳ ಮನೆಗಳೇ ಇವರಿಗೆ ಗುರಿಯಾಗಿವೆ ಈ ಸರ್ಕಾರಕ್ಕೆ ಮುಸ್ಲಿಂರ ರಕ್ಷಣೆ ಬೇಕಾಗಿದೆ. ಹಿಂದೂಗಳ ರಕ್ಷಣೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅವರು ಸರ್ಕಾರಕ್ಕೆ ಹೆದರುತ್ತಿದ್ದಾರೆ. ಪೊಲೀಸರಿಗೆ ಗಾಯಗಳಾದರೂ ಕೂಡ ತಿಳಿಸುತ್ತಿಲ್ಲ. ಪೊಲೀಸರನ್ನು ಕೂಡ ಅವರು ಬಿಟ್ಟಿಲ್ಲ. ಸಾಲದ್ದಕ್ಕೆ ೧೪೪ ಸೆಕ್ಷನ್ ಜಾರಿ ಮಾಡಿದ್ದಾರೆ. ಅದು ತಪ್ಪಲ್ಲ. ಆದರೆ ಗಲಾಟೆ ನಡೆಯದ ಪ್ರದೇಶವಾದ ಶಿವಮೊಗ್ಗ ಸಿಟಿಗೂ ಇದನ್ನು ವಿಸ್ತರಿಸಿದ್ದಾರೆ. ವ್ಯಾಪಾರಸ್ತರು ಏನು ಮಾಡಬೇಕು. ತಕ್ಷಣವೇ ೧೪೪ ಸೆಕ್ಷನ್ ತೆಗೆದುಹಾಕಬೇಕು ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments