Cnewstv / 30.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ತೆರವು ಮಾಡಲಾಗಿದ್ದ ಕೇಸರಿ ಬಾವುಟ ಮತ್ತೆ ಕಟ್ಟಿದ ಹಿಂದೂ ಕಾರ್ಯಕರ್ತರು..
ಶಿವಮೊಗ್ಗ : ನಿನ್ನೆ ರಾತ್ರಿ ಎಎ ಸರ್ಕಲ್ ಹತ್ತಿರ ಕೇಸರಿ ಬಾವುಟ ತೆರವು ವಿಚಾರವಾಗಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಗಿದ್ದು, ತೆರವು ಮಾಡಲಾಗಿದ್ದ ಕೇಸರಿ ಬಾವುಟಗಳನ್ನು ಹಿಂದು ಪರ ಕಾರ್ಯಕರ್ತರು ಮತ್ತೆ ಕಟ್ಟಿದ್ದಾರೆ.
ಇದೇ ವಿಚಾರವಾಗಿ ನೆನ್ನೆ ರಾತ್ರಿ ಎರಡು ಕೋಮುಗಳ ನಡುವೆ ಗೊಂದಲ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಆಗಮಿಸಿದ ಎಸ್ ಪಿ ಮಿಥುನ್ ಕುಮಾರ್ ರವರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಮತ್ತೆ ಬಾವುಟ ಕಟ್ಟಲು ಅವಕಾಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಕೇಸರಿ ಬಾವುಟವನ್ನು ಮತ್ತೆ ಕಟ್ಟಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಮುನ್ನೆಚ್ಚರಿ ಕಾರ್ಯಕ್ರಮವಾಗಿ ಎ ಎ ಸರ್ಕಲ್ ಮತ್ತು ಶಿವಪ್ಪ ನಾಯಕ ವೃತ್ತ ಸೇರಿದಂತೆ ಶಿವಮೊಗ್ಗ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv