Breaking News

ಅಮೀರ್ ಅಹ್ಮದ್ ವೃತ್ತದಲ್ಲಿ ಬಾವುಟ, ಬ್ಯಾನರ್ ತೆರೆವು ವಿಚಾರವಾಗಿ ಕೆಲಕಾಲ ಗೊಂದಲ.

Www.cnewstv.in / 30.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಅಮೀರ್ ಅಹ್ಮದ್ ವೃತ್ತದಲ್ಲಿ ಬಾವುಟ, ಬ್ಯಾನರ್ ತೆರೆವು ವಿಚಾರವಾಗಿ ಕೆಲಕಾಲ ಗೊಂದಲ..

ಶಿವಮೊಗ್ಗ : ರಾತ್ರೋರಾತ್ರಿ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಆಗಮಿಸಿದ ಘಟನೆ ನಡೆದಿದೆ.

ನೆನ್ನೆ ರಾತ್ರಿ ಎಎ ಸರ್ಕಲ್ ಮತ್ತು ಶಿವಪ್ಪ ನಾಯಕ ಪ್ರತಿಮೆಯ ಹತ್ತಿರ, ಕೇಸರಿ ಬಾವುಟಗಳನ್ನ ತೆಗೆದಿದ್ದಕ್ಕೆ ಕೆಲಕಾಲ ವಾಗ್ವಾದ ನಡೆಯಿತು.

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆ ಕೇಸರಿ ಬಾವುಟ ಮತ್ತು ಬಂಟಿಂಗ್ಸ್ ಗಳನ್ನ ಕಟ್ಟಲಾಗಿತ್ತು ರಾತ್ರಿ ಈದ್ ಮಿಲಾದ್ ಹಬ್ಬದ ಆಚರಣೆಯ ಪ್ರಯುಕ್ತ ಕೇಸರಿ ಬಾವುಟಗಳನ್ನು ತೆರವುಗೊಳಿಸಿ, ಹಸಿರು ಬಾವುಟ ಹಾಗೂ ಬಟ್ಟೆಗಳಿಂದ ಅಲಂಕಾರ ಮಾಡಲು ಮುಸಲ್ಮಾನ್ ಸಮಿತಿ ಸದಸ್ಯರು ಮುಂದಾಗಿದ್ದಾರೆ. ಈ ವೇಳೆ ಯಾರನ್ನು ಕೂಡ ಕೇಳದೆ ಕೇಸರಿ ಬಾವುಟಗಳನ್ನು ತೆಗೆಯುತ್ತಿದ್ದಾರೆ ಎಂದು ಹಿಂದೂ ಪರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಇದೇ ವಿಚಾರವಾಗಿ ಎರಡು ಕೋಮುಗಳ ನಡುವೆ ರಾತ್ರಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಎಸ್ ಪಿ ಮಿಥುನ್ ಕುಮಾರ್ ಅವರು ಎರಡು ಕೋಮಿನ ಮುಖಂಡರ ಜೊತೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನ ತಿಳಿಗೊಳಿಸಿದರು.

ಬಂಟಿಂಗ್ಸ್ ಬಾವುಟಗಳನ್ನು ಅಳವಡಿಸುವ ವೇಳೆ ಹಾಗೂ ತೆರವುಗೊಳಿಸುವಾಗ ಗೊಂದಲ ಉಂಟಾಗಿದೆ. ಹಬ್ಬದ ವಾತಾವರಣ ಇರುವಾಗ ಜನರು ಸೇರಿಕೊಂಡಿದ್ದಾರೆ. ಶಿವಮೊಗ್ಗದ ಪರಿಸ್ಥಿತಿ ಶಾಂತವಾಗಿದೆ. ಯಾರು ಕೂಡ ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ.

ಮಿಥುನ್ ಕುಮಾರ್.‌ ಎಸ್ ಪಿ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*