Www.cnewstv.in / 27.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸೌಹಾರ್ದವೇ ಹಬ್ಬ ಸಮಿತಿವತಿಯಿಂದ ಹಿಂದೂ ಮಹಾಸಭಾ ಗಣಪತಿಗೆ ಮಾಲಾರ್ಪಣೆ.
ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿಗೆ ಸೌಹಾರ್ದವೇ ಹಬ್ಬ ಶಾಂತಿ ನಡಿಗೆ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.
ನಗರದಲ್ಲಿ ಈಗಾಗಲೇ ಎರಡು ಬಾರಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಾಂತಿನಡಿಗೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು ಇಂದು ಸಮಿತಿಯ ಪ್ರಮುಖರು ಗಣಪತಿಗೆ ಮಾಲಾರ್ಪಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ವಕೀಲ ಕೆ.ಪಿ.ಶ್ರೀಪಾಲ, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, ಓಪನ್ ಮೈಡ್ ಸ್ಕೂಲ್ ನ ಮುಖ್ಯಸ್ಥರಾದ ಕಿರಣ್ ಕುಮಾರ್, ಜಾಮಿಯ ಮಸೀದಿ ಸದಸ್ಯರಾದ ಮೊಹಮದ್ ಹುಸೇನ್, ಮುಸ್ಲಿಂ ಮುಖಂಡರು ಮತ್ತು ಅಜ್ ಕಾ ಇನ್ ಕಿಲಾಬ್ ಪತ್ರಿಕೆಯ ಲಿಯಾಕತ್,ಪ್ರಗತಿಪರ ಹೋರಾಟಗಾರರಾದ ಸುರೇಶ್ ಅರಸಾಳು, ಸಾಹಿತಿ , ಅಂಕಣಕಾರ ಬಿ.ಚಂದ್ರೆಗೌಡ, ರೈತಸಂಘ
ಟಿ.ಎಂ ಚಂದ್ರಪ್ಪ, ಚೇತನ್ , ಪ್ರಸಾದ್ ಮೊದಲಾದವರು ಹಾಜರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv