Www.cnewstv.in / 27.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹಿಂದೂ ಮಹಾಸಭಾ ಗಣಪತಿ : ಈ ಬಾರಿಯ ಆಕರ್ಷಣೆ ಉಗ್ರ ನರಸಿಂಹ..!!
ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಸಕಲ ಸಿದ್ಧತೆಗಳು ಬರದಿಂದ ಸಾಗುತ್ತಿದೆ. ಶಿವಮೊಗ್ಗ ನಗರ ಸಂಪೂರ್ಣವಾಗಿ ಕೇಸರಿಮಯವಾಗುತ್ತಿದೆ. ಗಾಂಧಿಬಜಾರ್ ತುಂಬಾ ಕೇಸರಿ ಬಂಟಿಂಗ್ಸ್ ಗಳನ್ನು ಕಟ್ಟಲಾಗುತ್ತಿದೆ.

ಗಾಂಧಿ ಬಜಾರ್ ನ ಮುಖ್ಯದ್ವಾರದಲ್ಲಿ ನಿರ್ಮಾಣ ಮಾಡಲಾಗಿರುವ 30 ಅಡಿ ಎತ್ತರದ ಉಗ್ರ ನರಸಿಂಹನ ವಿಡಿಯೋ ಎಲ್ಲೆಡೆ ವೈರಲಾಗಿದೆ
ವಿಡಿಯೋ ಕೃಪೆ : ವಾಟ್ಸಾಪ್
ಜೀವನ್ ಕಲಾ ಸನ್ನಿಧಿಯ ಕಲಾವಿದರು ಉಗ್ರ ನರಸಿಂಹ ಸ್ವಾಮಿಯು ಹಿರಣ್ಯಕಶ್ಯಪನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಸಂಹಾರ ಮಾಡುತ್ತಿರುವ ರೀತಿಯಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕಾಗಿ ಬರೋಬ್ಬರಿ ಮೂರು ತಿಂಗಳು 20 ಜನ ಕಲಾವಿದರು ಕೆಲಸ ಮಾಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv