Breaking News

ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಮಾಜದ ಅಸ್ತಿತ್ವಕ್ಕೆ ಕುಂದು ಉಂಟಾದಾಗ ಸಿಡಿದೇಳುವವನೇ ನಿಜವಾದ ವೀರಭದ್ರ..

Www.cnewstv.in / 23.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಮಾಜದ ಅಸ್ತಿತ್ವಕ್ಕೆ ಕುಂದು ಉಂಟಾದಾಗ ಸಿಡಿದೇಳುವವನೇ ನಿಜವಾದ ವೀರಭದ್ರ..

ಶಿವಮೊಗ್ಗ : ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಮಾಜದ ಅಸ್ತಿತ್ವಕ್ಕೆ ಕುಂದು ಉಂಟಾದಾಗ ಸಿಡಿದೇಳುವವನೇ ನಿಜವಾದ ವೀರಭದ್ರ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ.

ಇಂದು ನಗರದ ಚೌಕಿ ಮಠದ ಆವರಣದಲ್ಲಿ ವೀರಭದ್ರೇಶ್ವರ ಜಯಂತ್ಯೋತ್ಸವ ಅಂಗವಾಗಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಬಳಿಕ ಧರ್ಮಸಭೆಯಲ್ಲಿ ಮಾತನಾಡಿದ ಅವರು,
ವೀರಭದ್ರ ಉಗ್ರ ಸ್ವರೂಪದ ಪ್ರತಿಕ. ತನ್ನ ಮಗಳಿಗೆ ಅವಮಾನ ಮಾಡಿದ ದಕ್ಷಬ್ರಹ್ಮನ ತಲೆ ಕಡೆದು ಯಜ್ಞಕ್ಕೆ ಹಾಕಿದವನು. ಶಿವನ ಜಟೆ ಇಂದ ಉದ್ಭವಿಸಿದವನು. ಸ್ವಾಭಿಮಾನದ ಪ್ರತೀಕ. ಸಮಾಜದ ಆತ್ಮಭಿಮಾನಕ್ಕೆ ಮತ್ತು ಪರಂಪರೆಗೆ ಹಲವಾರು ಘಟನೆಗಳು ಧಕ್ಕೆ ತಂದಿದೆ. ಆಗ ಸಮಾಜ ಬಾಂಧವರು ಜಾಗೃತರಾದಾಗ ಮಾತ್ರ ವೀರಭದ್ರನ ನಿಜಭಕ್ತರಾದಾಗ ಮಾತ್ರ ಈ ಜಯಂತಿ ಉತ್ಸವ ಸಾರ್ಥಕವಾಗುತ್ತದೆ ಎಂದರು.

ನಾವು ಹೂ ತೋಟದ ಮಕರಂದ ಹೀರಲು ಬರುವ ದುಂಬಿಗಳಂತೆ ಸಮಾಜ ಈ ಕಾರ್ಯಕ್ರಮಕ್ಕೆ ಒಗ್ಗಟ್ಟಾಗಿ ಶ್ರೀಗಳ ಆಶೀರ್ವಚನ ಕೇಳಲು ಬಂದಿದೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು. ನಾಡನ್ನು ಸರಿ ದಿಕ್ಕಿನಲ್ಲಿ ತರಲು ಇಂತಹ ಧರ್ಮಸಭೆಗಳ ಅವಶ್ಯಕತೆ ಇದೆ. ಸ್ವಾಭಿಮಾನ ಎತ್ತು ಹಿಡಿದು ಅವಮಾನ ಮೆಟ್ಟಿ ನಿಲ್ಲಲು ವೀರಭದ್ರೇಶ್ವರ ಜಯಂತಿ ಆಚರಣೆ ಅಗತ್ಯ. ವೀರಶೈವರು ಸಮಾನತೆಯ ಸಂದೇಶವನ್ನು ಸಾರಿ ಎಲ್ಲಾ ಸಮಾಜದ ನಾಯಕತ್ವವನ್ನು ತೆಗೆದುಕೊಂಡು ಒಟ್ಟಾಗಿ ಕೊಂಡೊಯ್ಯುವಂತಹ ಸಮಾಜ ಇದು. ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸಂಬಂಧಗಳನ್ನು ಕಡಿದುಕೊಳ್ಳುವಂತಹ ಈ ಸಂದರ್ಭದಲ್ಲಿ ಬೆಸೆಯುವ ಕೆಲಸವನ್ನು ಈ ಸಭೆ ಮಾಡುತ್ತಿದೆ ಎಂದರು ಸಮಾಜದ ಅಸ್ತಿತ್ವ ಸಿಟಿಲವಾಗುತ್ತಿದೆ ಸಮಾಜದಲ್ಲಿ ಒಡಕನ್ನು ತರುವ ಕೆಲಸವನ್ನು ದುಷ್ಟ ಶಕ್ತಿಗಳು ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಮಾಜನಾಯಕತ್ವ ವಹಿಸುವ ಅನಿವಾರ್ಯತೆ ಇದೆ ಎಂದರು.

              B Y  ವಿಜಯೇಂದ್ರ,  ಶಿಕಾರಿಪುರ ಶಾಸಕ.

ಹಾವೇರಿಯಲ್ಲಿ ನೂರಕ್ಕೂ ಹೆಚ್ಚು ವೀರಶೈವ ಕುಟುಂಬಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದೆ. ಎಲ್ಲಾ ಮೂಲೆ ಮೂಲೆಗೂ ಕ್ರಿಶ್ಚನ್ ಧರ್ಮ ತಲುಪುತ್ತಿರುವ ಈ ಸಂದರ್ಭದಲ್ಲಿ ವೀರಶೈವರು ಜಾಗರೂಕರಾಗಿ ಶ್ರೀಗಳ ನೇತೃತ್ವದಲ್ಲಿ ನಮ್ಮ ಸಮಾಜವನ್ನು ಬಿಟ್ಟು ಹೋದವರನ್ನು ಮರಳಿ ತರುವ ಕೆಲಸ ಆಗಬೇಕಾಗಿದೆ ಎಂದರು.

                 ಶಾಸಕ S N ಚನ್ನಬಸಪ್ಪ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*