Www.cnewstv.in / 19.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಪಕ್ಷದ ಶೋಕಾಶ್ ನೋಟಿಸ್ ಹಿನ್ನಲೆ ಹೆಚ್ ಸಿ ಯೋಗೇಶ್ ರಿಂದ ಜಿಲ್ಲೆಯ ಪ್ರಮುಖ ನಾಯಕರ ವಿರುದ್ಧ ಹೈಕಮಾಂಡ್ ಗೆ ಪ್ರತಿ ದೂರು.
ಶಿವಮೊಗ್ಗ : ಕಾಂಗ್ರೆಸ್ ಪಕ್ಷದ ವತಿಯಿಂದ ಹೆಚ್ ಸಿ ಯೋಗೇಶ್ ರವರಿಗೆ ನೀಡಿದ ಶೋಕಾಶ್ ನೋಟಿಸ್ ಹಿನ್ನಲೆ ಜಿಲ್ಲೆಯ ಪ್ರಮುಖ ನಾಯಕರ ವಿರುದ್ದ ಹೈಕಮಾಂಡಿಗೆ ಯೋಗೇಶ್ ರವರು ಪ್ರತಿ ದೂರನ್ನು ನೀಡಿದ್ದಾರೆ ನೀಡಿದ್ದಾರೆ.
ಹೈಕಮಾಂಡ್ ಗೆ ಬರೆದ ಪತ್ರದಲ್ಲಿ ಏನಿದೆ ??
ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿ ಮತ್ತು ನಮ್ಮ ಪಕ್ಷವನ್ನು ಗೌರವಿಸುವ ವ್ಯಕ್ತಿಯಾಗಿ, ಹೆಚ್ ಸಿ ಯೋಗೇಶ್ ಅದ ನಾನು ಸುಮಾರು 25 ವರ್ಷಗಳಿಂದ, ಪಕ್ಷವಹಿಸಿದ ಎಲ್ಲ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದೇನೆ ಹಾಗೂ ಪಕ್ಷ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಗೌರವಿಸುವ ವ್ಯಕ್ತಿಯಾಗಿರುತ್ತೇನೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 30-8-2023 ರಂದು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆ, ಕಾರ್ಯಕ್ರಮದಲ್ಲಿ ನಾನು ಮತ್ತು ನನ್ನ ಬೆಂಬಲಿಗರು ಉದ್ದೇಶಪೂರ್ವಕವಾಗಿ ಶ್ರೀ ಆಯನೂರು ಮಂಜುನಾಥ್ ರವರಿಗೆ ದೈಹಿಕ ಹಲ್ಲೆ ನಡೆಸಿ, ಅವಮಾನ ಮಾಡಿರುತ್ತೇವೆ ಎಂದು ಶಿವಮೊಗ್ಗ ನಗರದ ಕೆಲವು ಕಾಂಗ್ರೆಸ್ ಮುಖಂಡರು ಆರೋಪ ಮಾಡಿರುವ ಬಗ್ಗೆ ಮೇಲಿನ ಉಲ್ಲೇಖ ಪತ್ರದಲ್ಲಿ ಸಮಜಾಯಿಸಿಯನ್ನು ಕೇಳಿರುತ್ತೀರಿ.
ಪಕ್ಷದ ಎಲ್ಲಾ ನಿರ್ಧಾರಗಳಿಗೆ ಬದ್ಧರಾಗಿರುವ ನಾನಾಗಲಿ ಅಥವಾ ನನ್ನ ಬೆಂಬಲಿಗರಾಗಲಿ ಉಲ್ಲೇಖಿಸಿದ ಅಡಕದಲ್ಲಿರುವ ಪತ್ರದಲ್ಲಿ ಹೇಳಿರುವಂತೆ ಯಾವುದೇ ರೀತಿಯ ದುರ್ನಾಡತೆಯನ್ನು ತೋರಿರುವುದಿಲ್ಲ. ಈ ಹಿಂದೆ ನಡೆದ ಮೇ-2023 ರ ವಿಧಾನಸಭೆಯ ಚುನಾವಣೆಯಲ್ಲಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಆರ್ ಪ್ರಸನ್ ಕುಮಾರ್ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಶ್ರೀ ಎಸ್ ಕೆ ಮರಿಯಪ್ಪ ಇವರುಗಳಿಗೆ ಸದರಿ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಲು ಮನವಿ ಮಾಡಿ, ಶಿವಮೊಗ್ಗ ನಗರದ ಬೂತ್ ಮಟ್ಟದ ಜವಾಬ್ದಾರಿಯನ್ನು ನೀಡಿದ್ದೆ. ಆದರೆ ಸದರಿ ರವರು, ಕೇವಲ ಎರಡು ದಿವಸ ಬೂತ್ ಮಟ್ಟದಲ್ಲಿ ಸಂಪನ್ಮೂಲಗಳನ್ನು ವಿತರಿಸಿ ತಮಗೆ ಪಕ್ಷದ ಪರವಾಗಿ ಕೆಲಸ ಮಾಡಲು ಆಗುವುದಿಲ್ಲವೆಂದು ಇದ್ದಂತಹ ಬೂತ್ ಮಟ್ಟದ ಎಲ್ಲಾ ವಿವರಗಳನ್ನು ನನ್ನ ಸಹೋದರನಿಗೆ ಕೊಟ್ಟು ಹೋದರು. ತದನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ, ಎ,ಐ,ಸಿ,ಸಿ.ಯ ಚುನಾವಣೆ ಉಸ್ತುವಾರಿಗಳಾದಂತಹ ಶ್ರೀಮತಿ ದೀಪಾ ದಾಸ್ ಮುನಷಿ, ಶಿವಮೊಗ್ಗ ಜಿಲ್ಲಾ ಚುನಾವಣಾ ಉಸ್ತುವಾರಿಗಳು, ಶ್ರೀ. ಟಿ. ಸಿದ್ದಿಕ್ಕಿ, ಶಿವಮೊಗ್ಗ ನಗರ ವನ್ 113 ಚುನಾವಣಾ ಉಸ್ತುವಾರಿಗಳು ಶ್ರೀ ಮಯೂರ್ ಜೈ ಕುಮಾರ್, ಎಐಸಿಸಿ ಕಾರ್ಯದರ್ಶಿಗಳು, ಶಿವಮೊಗ್ಗ ಜಿಲ್ಲಾ ಉಸ್ತುವಾರಿಗಳು, ಶ್ರೀ ಷಾಪಿ ಬೆರಂಬಲ್, ಶಿವಮೊಗ್ಗ ನಗರ 113 ಚುನಾವಣಾ ಉಸ್ತುವಾರಿಗಳ ನೇತೃತ್ವದಲ್ಲಿ ಸಭೆ ಕರೆದಾಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇವರಿಬ್ಬರು (ಆರ್ ಪ್ರಸನ್ ಕುಮಾರ್ ಮತ್ತು ಎಸ್ ಕೆ ಮರಿಯಪ್ಪರವರು) ನೀರು ದುನಿಯಾದಲ್ಲಿ ಉಸ್ತುವಾರಿಗಳ ಮುಂದೆ ಧುರುನಾಡತೆಯಿಂದ ವರ್ತಿಸುತ್ತಾ, ಕೂಗಾಡುತ್ತಾ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ವಿರುದ್ಧ ಹಗೆ ಸಾಧಿಸಿದರು. ಇವರನ್ನು ಸಮಾಧಾನಪಡಿಸಲು ಉಸ್ತುವಾರಿಗಳು ಬಹಳಷ್ಟು ಶ್ರಮ ಪಟ್ಟರು, ಈ ಘಟನೆಯಿಂದ ಅಲ್ಲಿ ನೆರೆದಿದ್ದಂತಹ ಮತ್ತು ಅಲ್ಲಿ ಓಡಾಡುತ್ತಿದ್ದ ಕೆಲವು ಸಾರ್ವಜನಿಕರ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿ, ಸಾರ್ವಜನಿಕ ಜಾಲತಾಣದಲ್ಲಿ ಹರಿಬಿಟ್ಟರು. ಮಾರನೇ ದಿವಸ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂಬುದು ಪ್ರಕಟಣೆಗೊಂಡಿತು. ಈ ಒಂದು ಘಟನೆಯು ನಮ್ಮ ಪಕ್ಷಕ್ಕೆ ಚುನಾವಣೆಯಲ್ಲಿ ಭಾರಿ ಹಿನ್ನಡೆಯನ್ನು ಉಂಟು ಮಾಡಿತು. ಇದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಾವುಗಳು ಸಾಕ್ಷಿಯಾಗಿರುತ್ತೀರಿ ಹಾಗೂ ಸೂಚಿಸಿರುವ ಎಐಸಿಸಿ ಜಿಲ್ಲಾ ಪ್ರಮುಖರು ಸಾಕ್ಷಿಯಾಗಿದ್ದು ಇವರುಗಳು ಈಗಾಗಲೇ ಕೆಪಿಸಿಸಿ ಕಚೇರಿಗೆ ಶ್ರೀ ಆರ್ ಪ್ರಸನ್ ಕುಮಾರ್ ಹಾಗೂ ಶ್ರೀ ಎಸ್ ಕೆ ಮರಿಯಪ್ಪ ನವರ ವಿರುದ್ಧ ದೂರನ್ನು ನೀಡಿರುತ್ತಾರೆ, ದಯವಿಟ್ಟು ಇವರಿಬ್ಬರ ಹತ್ತಿರ ಈ ವಿಚಾರವಾಗಿ ಸ್ಪಷ್ಟೀಕರಣವನ್ನು ಕೇಳಬೇಕಾಗಿ ತಮ್ಮಲ್ಲಿ ಕೋರುತ್ತೇನೆ. ಜಿಲ್ಲಾ ಕಾಂಗ್ರೆಸ್ ನ ಕಚೇರಿಯಲ್ಲಿ ಉದ್ದೇಶಪೂರ್ವಕವಾಗಿ ನಡೆದ ಘಟನೆಯನ್ನು ನೋಡಿದರೆ ಇವರಿಬ್ಬರೂ ನನ್ನ ವಿರುದ್ಧ ಆ ಚುನಾವಣೆಯಲ್ಲಿ ಸ್ಪರ್ಧಿಸಿದ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ ಆಯನೂರು ಮಂಜುನಾಥ್ ರವರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು ಎಂಬುದು ಈಗ ಸುಳ್ಳು ದೂರು ನೀಡಿರುವುದನ್ನು ನೋಡಿದರೆ ಅದು ದೃಢಪಡುತ್ತದೆ. ಈ ಬಗ್ಗೆ ತಾವುಗಳು ಬೇಕಾದರೆ ಎಐಸಿಸಿ ಇಂದ ನೇಮಕಗೊಂಡ ಚುನಾವಣೆಯ ವೀಕ್ಷಕರ ಬಳಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಆದರೆ ಸದರಿಯವರು ನಮ್ಮ ಪಕ್ಷ ಸೇರಿದ ಬಳಿಕ ನಾವು ಯಾವುದೇ ರೀತಿಯ ಆರೋಪವಾಗಲಿ ಅಥವಾ ಕೆಲವು ಕಾಂಗ್ರೆಸ್ ಮುಖಂಡರುಗಳು ನಮೂದಿಸಿರುವಂತೆ ನಾನು ಯಾವುದೇ ರೀತಿಯ ಅನುಚಿತ ವರ್ತನೆಯನ್ನು ತೋರಿರುವುದಿಲ್ಲ. ಉದಾಹರಣೆಗೆ ತಮ್ಮ ಉಲ್ಲೇಖ ಪತ್ರದ ಅಡಕದಲ್ಲಿ ತಿಳಿಸಿರುವಂತೆ,
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಪತ್ರಕರ್ತರೊಂದಿಗೆ ಸಂದರ್ಶನ ನಡೆಸುತ್ತಿದ್ದಾಗ ಸುಮಾರು 8 ರಿಂದ 10 ಎಲೆಕ್ಟ್ರಾನಿಕ್ ಮಾಧ್ಯಮಗಳು ಪತ್ರಿಕಾ ಮಾಧ್ಯಮದವರು ಮತ್ತು ಸುಮಾರು 10 ರಿಂದ 15 ಮೊಬೈಲ್ ಫೋನ್ ಗಳು ಈ ಸಂದರ್ಶನವನ್ನು ಚಿತ್ರೀಕರಣ ಮಾಡಿಕೊಂಡಿರುತ್ತಾರೆ ಜಿಲ್ಲಾ ಕಾಂಗ್ರೆಸ್ನ ಸಾಮಾಜಿಕ ಜಾಲತಾಣದ ಪದಾಧಿಕಾರಿಗಳು ಸಹ ಚಿತ್ರೀಕರಣ ಮಾಡಿರುತ್ತಾರೆ. ಇದರಲ್ಲಿ ದೂರುದಾರರು ಸೂಚಿಸಿರುವಂತೆ ಶ್ರೀ ಆಯನೂರು ಮಂಜುನಾಥ್ ರವರನ್ನು ಉದ್ದೇಶಪೂರ್ವಕವಾಗಿ ಎರಡು ಬಾರಿ ತಳ್ಳಿರುತ್ತೇನೆ ಎಂದು ತಿಳಿಸಿರುತ್ತಾರೆ. ನಾನು ಕಮಲಿ ಕೇಳಿಕೊಳ್ಳುವುದೇನೆಂದರೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಪತ್ರಿಕೆ ಗೋಷ್ಠಿಯಲ್ಲಿ ಯಾವ ಸಂದರ್ಭದಲ್ಲಿ ಎರಡು ಬಾರಿ ತಳ್ಳಿದ್ದೇನೆಂದು, ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಡಿರುವ ವಿಡಿಯೋದ ಮುಖಾಂತರ ಅಥವಾ ಅಲ್ಲಿ ಬಂದಿದ್ದ ಎಲೆಕ್ಟ್ರಾನಿಕ್ ಮಾಧ್ಯಮದವರು ಮಾಡಿರುವ ವಿಡಿಯೋದ ಮುಖಾಂತರ ತಿಳಿದುಕೊಳ್ಳಬೇಕಾಗಿ ಕೋರುತ್ತೇನೆ. ಇದು ಸಹ ಸತ್ಯಕ್ಕೆ ದೂರವಾಗಿದ್ದು ನಾನೇನಾದರೂ ಈ ರೀತಿ ತಳ್ಳಿದ್ದರೆ ದೂರುದಾರರ ಸುಳ್ಳಿನ ಆರೋಪದ ಮುಂಚೆಯೇ ಮಾಧ್ಯಮದವರು ಈ ವಿಚಾರವನ್ನು ಪ್ರಚಾರ ಪಡಿಸುತ್ತಿದ್ದರು ಮತ್ತು ಸಾಮಾಜಿಕ ಜಾಣತನದಲ್ಲಿ ಈ ವಿಷಯ ಹರಿದಾಡುತ್ತಿತ್ತು.
ಶ್ರೀ ಆಯನೂರು ಮಂಜುನಾಥ್ ರವರನ್ನು ತಳ್ಳಿ ಅವರಿಗೆ ಮೀಸಲಿದ್ದ ಆಸನದಲ್ಲಿ ನಾನು ಆಸೀನರಾಗಿರುತ್ತೇನೆ ಎಂದು ಆಪಾದಿಸಿದ್ದಾರೆ. ಆದರೆ ಪಕ್ಷದ ಶಿಷ್ಟಾಚಾರ ಪ್ರಕಾರ ವೇದಿಕೆಯಲ್ಲಿ ಅಧ್ಯಕ್ಷರಿಗೆ ಮಾತ್ರ ಆಸಿನವನ್ನು ಮೀಸಲು ಇಟ್ಟಿರುತ್ತಾರೆ ಹೊರತು ಬೇರೆ ಯಾವ ಹೆಸರನ್ನು ಸಹ ಇಲ್ಲಿನ ಇಲ್ಲ ಕಾಂಗ್ರೆಸ್ ಕಚೇರಿಯಲ್ಲಿ ಆಸನದ ಮೇಲೆ ನಮೂದಿಸುವುದಿಲ್ಲ, ಇದು ಎಲ್ಲರಿಗೂ ತಿಳಿದಂತಹ ವಿಷಯವಾಗಿರುತ್ತದೆ. ಆದ್ದರಿಂದ ಈ ಆರೋಪವು ಸಹ ಸತ್ಯಕ್ಕೆ ದೂರವಾಗಿರುತ್ತದೆ. ಅದಲ್ಲದೆ ಪತ್ರದಲ್ಲಿ ಸಹಿ ಮಾಡಿರುವ ಕೆಲವು ಮುಖಂಡರುಗಳನ್ನು ತಾವುಗಳು ವೈಯಕ್ತಿಕವಾಗಿ ಕರೆದು ಈ ಬಗ್ಗೆ ಸ್ಪಷ್ಟನೆ ಪಡೆಯಬೇಕಾಗಿ ಕೋರುತ್ತೇನೆ.
ದೂರುದಾರರು ಮಾಡಿರುವ ಆರೋಪವನ್ನು ಸಾಬೀತು ಪಡಿಸಲು ವಿಡಿಯೋ ತುಣುಕನ್ನು ಅಥವಾ ಫೋಟೋಗ್ರಾಫರ್ ಗಳನ್ನು ನೂರುದಾರರಿಂದ ಪಡೆಯಬೇಕಾಗಿ ಕೇಳಿಕೊಳ್ಳುತ್ತೇನೆ. ಸದರಿಯವರು ಕೊಡಲು ವಿಫಲವಾದಲ್ಲಿ ದೂರಿಗೆ ಸಹಿ ಮಾಡಿರುವ ಎಲ್ಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ.
ಈ ಮೇಲ್ಕಂಡ ಎಲ್ಲ ವಿಷಯವನ್ನು ಗಮನಿಸಿ, ನನ್ನ ಮೇಲೆ ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿರುತ್ತದೆ ಎಂದು ಹೇಳಲು ಬಯಸುತ್ತೇನೆ ಹಾಗೂ ಪಕ್ಷಕ್ಕೆ ಧಕ್ಕೆ ಯಾವುದೇ ತರಹದ ಅಗ್ರವ ವರ್ತನೆಯನ್ನು ನಾನು ಮಾಡಿರುವುದಿಲ್ಲ ಮತ್ತೆ ಮುಂದೆಯೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv