Breaking News

ಸಾಗರ ಜಂಬಗಾರು-ಆನಂದಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 132 ಮತ್ತು 105 ಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗ.

Cnewstv / 13.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಾಗರ ಜಂಬಗಾರು-ಆನಂದಪುರ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 132 ಮತ್ತು 105 ಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗ.

ಶಿವಮೊಗ್ಗ : ಸಾಗರ ಜಂಬಗಾರು-ಆನಂದಪುರ ಸ್ಟೇಷನ್ ನಡುವೆ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ನಂ:132 ಕಿ.ಮಿ :144/200-300 ಮತ್ತು ಕುಂಸಿ-ಆನಂದಪುರ ಸ್ಟೇಷನ್ ನಡುವೆ ಬರುವ ಎಲ್ ಸಿ ನಂ: 105 ಕಿ.ಮೀ 117/000-100 ರಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ದಿನಾಂಕ:13.9.2023 ರಿಂದ ದಿನಾಂಕ:15.9.2023 ಮತ್ತು ದಿನಾಂಕ: 20.9.2023 ರಿಂದ ದಿನಾಂಕ:22.9.2023 ರವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸ ಕಲ್ಪಿಸಲಾಗಿದೆ.

ಸೆ.13 ರಿಂದ 15ರವರೆಗೆ ಸಾಗರ ಜಂಬಗಾರು -ಆನಂದಪುರ ಮಧ್ಯ ಬರುವ ರೈಲ್ವೆ ಲೆವಲ್ ಕ್ರಾಸಿಂಗ್ 132 | ರನ್ನು ತರದು ಪರಿಶೀಲನೆ ಮಾಡುವ ಸಂದರ್ಭದಲ್ಲಿ ವಾಹನಗಳು ಸೂರಬ ರಸ್ತೆಯ ಮೂಲಕ ರೈಲ್ವೆ ಲೆವೆಲ್ ಕ್ರಾಸ್ ಗೇಟ್ 130ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.

ಸೆ.20 ರಿಂದ ಸೆ. 22ರವರೆಗೆ ಕುಂಸಿ – ಆನಂದಪುರ ಮಧ್ಯೆ ಬರುವ – ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ 105 | ರನ್ನು ತೆರೆದು ತಾಂತ್ರಿವಾಗಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಎಲ್ಲಾ ಬೆಳಿಗ್ಗೆ 08:00 | ವಾಹನಗಳು ಆನಂದಪುರ -ಎಡೇಹಳ್ಳಿ – ಹೆಬ್ಬೆಲ್ ರಸ್ತೆ- ಅಡೂರು -ಕೋಣನತಲೆ- ಹೊಸೂರು ಮೂಲಕ ರೈಲ್ವೆ ಲೆವಲ್ ಕ್ರಾಸ್ ಗೇಟ್ ನಂ: 104 ರ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದಾಗಿರುತ್ತದೆ.

ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೂಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್‍ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಈ ಮೇಲ್ಕಂಡ ದಿನಾಂಕಗಳಲ್ಲಿ ಮಾತ್ರ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*