Cnewstv / 12.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ ರಾಜ್ಯದಲ್ಲಿಯೇ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಯುವಕ…
ಬೆಂಗಳೂರು : ಸಾಮಾನ್ಯವಾಗಿ ಹುಟ್ಟು ಹಬ್ಬವನ್ನು ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ, ಅನಾಥಾಶ್ರಮಗಳಲ್ಲಿ ಒಂದು ದಿನದ ಸೇವೆ ಮಾಡುವುದರ ಮೂಲಕ ಆಚರಿಸಿಕೊಳ್ಳುತ್ತಾರೆ ಆದರೆ ಇಲ್ನೊಬ್ಬ ಯುವಕ ತನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳುವುದರ ಮೂಲಕ ರಾಜ್ಯದಲ್ಲಿಯೇ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾನೆ.
ಈ ರೀತಿ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಯುವಕನೇ ಎಂ ಪಿ ಗಿರೀಶ್. ದೇವವನಹಳ್ಳಿ ಸಮೀಪದ ಮಲ್ಲೇಪುರದ ಯುವಕ. ಬಾಲ್ಯದಲ್ಲೇ ಅಂಬೇಡ್ಕರ್ ತತ್ವ ಸಿದ್ದಾಂತಗಳಿಗೆ ಮಾರುಹೋಗಿದ್ದ ಗಿರೀಶ್, ಮುಂಬೈನ ದಾದರ್ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣದ ಸ್ಥಳ ‘ಚೈತ್ಯ ಭೂಮಿ’ಗೆ ಎಲ್ಲ ಸಮುದಾಯದ ಜನರನ್ನೂ ಒಳಗೊಂಡ ತಮ್ಮ 100ಕ್ಕೂ ಹೆಚ್ಚು ಅನುಯಾಯಿಗಳ ಜತೆ ಚೈತ್ಯ ಭೂಮಿಗೆ ತೆರಳಿ ಅಂಬೇಡ್ಕರ್ ಸಮಾಧಿಗೆ ನಮನ ಸಲ್ಲಿಸುವ ಮೂಲಕ ತಮ್ಮ 32ನೇ ಜನ್ಮ ದಿನವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಿದ್ದಾರೆ.
ದೇವನಹಳ್ಳಿಯ ನಿವೃತ್ತ ಶಿಕ್ಷಕ ಪ್ರಕಾಶ್, ಗೃಹಿಣಿ ಸರೋಜಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಗಿರೀಶ್ ಚಿಕ್ಕವರು. ಕಾಲೇಜು ಮೆಟ್ಟಿಲು ಹತ್ತಿದಾಗಲೇ ದಲಿತ ಸಂಘರ್ಷ ಸಮಿತಿಯ ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದ ಅವರು ಇತರರಿಗಿಂತ ಭಿನ್ನವಾಗಿ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳ ದಾರಿಯಲ್ಲಿ ಸಾಗಿದ್ದಾರೆ. ಬಿಎ,ಎಲ್ಎಲ್ಬಿ ಪದವೀಧರರಾದ ಅವರು ದಲಿತರು, ಶೋಷಿತರ ಮಕ್ಕಳ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಾಜ್ಯದ ಎಲ್ಲ ದಲಿತ ಸಂಘಟನೆಗಳ ಜತೆ ಸೌಹಾರ್ದ ಸಂಬಂಧ ಇಟ್ಟುಕೊಂಡಿರುವ ಗಿರೀಶ್, ದಲಿತರು, ಶೋಷಿತರು ಮೇಲ್ವರ್ಗದ ಜನರ ಧೋರಣೆಗಳಿಗೆ ಪ್ರತಿಕಾರ ತೆಗೆದುಕೊಳ್ಳದೆ ವಿಶ್ವಾಸದಿಂದ ಅವರ ಮನಪರಿವರ್ತನೆ ಮಾಡುವ ಕೆಲಸದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ತಪ್ಪು ಮಾಡುವುದು, ದ್ವೇಷ, ಅಸೂಯೆ ಎಲ್ಲ ಸಮುದಾಯಗಳಲ್ಲೂ ತಲಾಂತರದಿಮದ ಇದೆ. ಅಂತಹ ಕೆಟ್ಟ ಸಂಪ್ರದಾಯಗಳಿಗೆ ತಿಲಾಂಜಲಿ ಹೇಳಿ, ಎಲ್ಲರೂ ಅಣ್ಣತಮ್ಮಂದಿರು, ಅಕ್ಕತಂಗಿಯರಂತೆ ಸಮಾಜದಲ್ಲಿ ಬಾಳಬೇಕಾದರೆ ದ್ವೇಷದ, ಪ್ರತೀಕಾರದ ಹೆಜ್ಜೆಗಳಿಗೆ ಮೊದಲು ವಿರಾಮ ನೀಡಬೇಕು. ಯಾರೇ ತಪ್ಪು ಹೆಜ್ಜೆ ಇಟ್ಟರೂ, ಅದನ್ನು ತಿದ್ದಲು ಮೊದಲ ಆದ್ಯತೆ ನೀಡಬೇಕು. ಆ ಮೂಲಕ ಅಸ್ಪೃಶ್ಯತೆ ನಿವಾರಿಸಬೇಕು. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಬೇಕು ಎನ್ನುವುದನ್ನು ಅವರು ತಮ್ಮ ಪ್ರತಿ ಹೆಜ್ಜೆಯಲ್ಲೂ ಸಾಧಿಸಿ ತೋರಿಸಿದ್ದಾರೆ.
ಅದಕ್ಕಾಗಿಯೇ ತಮ್ಮ ದೇವನಹಳ್ಳಿ ಕ್ಷೇತ್ರದ ಎಲ್ಲ ಸಮುದಾಯಗಳನ್ನೂ ಒಳಗೊಂಡ 125 ಜನರನ್ನು ಅಂಬೇಡ್ಕರ್ ಅವರ ಮಹಾ ಪರಿನಿರ್ವಾಹಣದ ಸ್ಥಳಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರಿಗೆ ಎಲ್ಲ ವ್ಯವಸ್ಥೆ ಮಾಡುವ ಜತೆಗೆ, ಎಲ್ಲರಿಗೂ ಅಂಬೇಡ್ಕರ್ ನಿಜವಾದ ಆಶಯಗಳನ್ನು ಮನವರಿಕೆ ಮಾಡಿಸಿದ್ದಾರೆ. ಬುದ್ಧನ ಪ್ರೀತಿ ಅರ್ಥ ಮಾಡಿಸಿದ್ದಾರೆ. ಅದಕ್ಕಾಗಿಯೇ ಪ್ರತಿ ವರ್ಷವೂ ಜನ್ಮದಿನದಂದು ‘ಚೈತ್ಯ ಭೂಮಿ’ಗೆ ತೆರಳುವ ಸಂಕಲ್ಪ ಮಾಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments