Cnewstv / 11.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ದಿಡೀರನೆ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಂಸದ ಬಿ ವೈ ರಾಘವೇಂದ್ರ.
ಶಿವಮೊಗ್ಗ : ಸಂಸದ ಬಿ ವೈ ರಾಘವೇಂದ್ರ ಅವರು ದಿಢೀರನೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಗಮನಹರಿಸಿದ್ದಾರೆ.
ಹೊಸನಗರದ ಹತ್ತಿರ ಬರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಸಂಸದರು ದಿಡೀರನೆ ಭೇಟಿ ನೀಡಿ, ಮಕ್ಕಳೊಂದಿಗೆ ಕೆಲ ಸಮಯ ಕಳೆದಿದ್ದಾರೆ. ಹಾಗೂ ಮಕ್ಕಳ ಆರೋಗ್ಯ ಮತ್ತು ಮೂಲ ಸೌಕರ್ಯಗಳ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಭೇಟಿಯ ವೇಳೆ ಶಾಲೆಗೆ ಹೊಸ ಕಟ್ಟಡದ ಅಗತ್ಯವಿರುವುದು ಅವರ ಗಮನಕ್ಕೆ ಬಂದಿದ್ದು ತುರ್ತಾಗಿ ಅದನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ನಾನು ತುಂಬಾ ಇಷ್ಟಪಟ್ಟು ಮಾಡುವ ಕೆಲಸ ಇದು, ದಿಢೀರನೆ ಯಾವುದೋ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಮಾತಾಡುವುದು. ಇವತ್ತು ಹೊಸನಗರದ ಹತ್ತಿರವಿರುವ ಇರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಹಾಗೆಯೇ ದಿಢೀರನೆ ಹೋಗಿದ್ದೆ. ಎಷ್ಟು ಚುರುಕಾಗಿರುವ ಮಕ್ಕಳು! ಅವರ ಅರೋಗ್ಯ, ಅವರಿಗಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿಕೊಂಡೆ. ಒಂದು ಹೊಸ ಕಟ್ಟಡದ ಅಗತ್ಯ ತುರ್ತಾಗಿರುವುದು ನನ್ನ ಗಮನಕ್ಕೆ ಬಂತು. ಆದಷ್ಟು ಬೇಗ ಅದನ್ನು ಒದಗಿಸಿಕೊಡುವ ಭರವಸೆ ಕೊಟೇಟು ಬಂದಿದ್ದೇನೆ. ಇನ್ನು ಈ ಭರವಸೆ ಸದಾ ನನ್ನ ಹೆಗಲ ಮೇಲಿರುವ ಜವಾಬ್ದಾರಿ.
– ಸಂಸದ ಬಿ ವೈ ರಾಘವೇಂದ್ರ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv