Breaking News

ಸದ್ಯದಲ್ಲೇ ನಾನು ನನ್ನ ಸ್ನೇಹಿತರು ಹಾಗೂ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ ಖಚಿತ..!!

Cnewstv / 7.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸದ್ಯದಲ್ಲೇ ನಾನು ನನ್ನ ಸ್ನೇಹಿತರು ಹಾಗೂ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆ ಖಚಿತ..!!

ಶಿವಮೊಗ್ಗ : ಸದ್ಯದಲ್ಲಿಯೇ ನಾನು ನನ್ನ ಸ್ನೇಹಿತರು ಹಾಗೂ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ನಾಯಕರಾದಂತಹ ಎಂ ಶ್ರೀಕಾಂತ್ ರವರು ತಿಳಿಸಿದ್ದಾರೆ.

ಹಲವು ದಿನಗಳಿಂದ ಶ್ರೀಕಾಂತ್ ರವರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಇಂದು ಈ ಸುದ್ದಿಗೆ ಶ್ರೀಕಾಂತ್ ರವರ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಿನ್ಯೂಸ್ ಗೆ ಮಾಹಿತಿ ನೀಡಿದ ಶ್ರೀಕಾಂತ್ ರವರು,

ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವುದು ಖಚಿತ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ಭೇಟಿಯಾಗಿ ಚರ್ಚೆಯನ್ನು ನಡೆಸಿದ್ದೇನೆ. ಕೇವಲ ನನಗೆ ಮಾತ್ರವಲ್ಲದೆ ಕಳೆದ 20- 25 ವರ್ಷಗಳಿಂದ ನನ್ನ ಜೊತೆ ಇದ್ದಂತಹ ಸ್ನೇಹಿತರು ಹಾಗೂ ನನ್ನ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ತೀರ್ಮಾನಿಸಿದ್ದೇನೆ. ಮುಂಬರಲಿರುವಂತಹ ಮಹಾನಗರ ಪಾಲಿಕೆ ಚುನಾವಣೆಗಳನ್ನ ಕೂಡ ಗಮನದಲ್ಲಿಟ್ಟುಕೊಂಡಿದ್ದೇನೆ. ಇದು ನನ್ನೊಬ್ಬನಿಗೆ ಮಾತ್ರವಲ್ಲ. ನನ್ನನ್ನು ನಂಬಿ ನನ್ನ ಜೊತೆಯಲ್ಲಿದ್ದಂತಹ ಎಲ್ಲರಿಗಾಗಿ ಈ ನಿರ್ಧಾರ. ಉಸ್ತುವಾರಿ ಮಂತ್ರಿಗಳಾದಂತಹ ಮಧು ಬಂಗಾರಪ್ಪ, ಜಿಲ್ಲಾ ನಾಯಕರ ಸಮ್ಮುಖದಲ್ಲಿಯೇ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದೇನೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*