Breaking News

ಆರು ವರ್ಷದ ಬಾಲಕಿ ಸೇರಿದಂತೆ ಐವರ ಮೇಲೆ ಹುಚ್ಚು ನಾಯಿ ದಾಳಿ.‌

Cnewstv / 02.09.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಆರು ವರ್ಷದ ಬಾಲಕಿ ಸೇರಿದಂತೆ ಐವರ ಮೇಲೆ ಹುಚ್ಚು ನಾಯಿ ದಾಳಿ.‌

ಶಿವಮೊಗ್ಗ : ಆರು ವರ್ಷದ ಬಾಲಕಿ ಸೇರಿದಂತೆ ಐವರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದಂತಹ ಘಟನೆ ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ನಡೆದಿದೆ.

ಶಿವಮೊಗ್ಗ ತಾಲೂಕಿನ ಬಿ.ಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆ ಬೆಳಗಲು ಗ್ರಾಮದಲ್ಲಿ ನೆನ್ನೆ ಸಂಜೆ ಶಾಲೆ ಮುಗಿಸಿ ಮನೆಗೆ ಹೋಗುತ್ತಿದ್ದ ಆರು ವರ್ಷದ ಬಾಲಕಿ ಬೇಬಿಯ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ.

 

ದಾಳಿಯಿಂದಾಗಿ ಮಗುವಿನ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಸರ್ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಷ್ಟೇ ಅಲ್ಲದೆ ಎರಡು ಮಕ್ಕಳು ಹಾಗೂ 3 ವಯಸ್ಕರ ಮೇಲೂ ಕೂಡ ಈ ಹುಚ್ಚು ನಾಯಿ ದಾಳಿ ಮಾಡಿದೆ.

ನಾಯಿ ದಾಳಿಗೆ ಒಳಗಾದವರು ಮೆಗ್ಗಾನ್ ಆಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ತೆರಳಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ಬೀದಿ ನಾಯಿ ಸೆರೆ ಹಿಡಿದು ಮಕ್ಕಳ ರಕ್ಷಣೆಯನ್ನು ಮಾಡಬೇಕೆಂಬುದು ಗ್ರಾಮಸ್ಥರ ಅಗ್ರಹ..

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*