Cnewstv / 29.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ವಾಹನ ಸವಾರರೇ ಎಚ್ಚರ- ಮೊದಲ ದಿನವೇ 655 ಕೇಸ್ –
ಇಂದು ಸಾವಿರದ ಗಡಿ ದಾಟುತ್ತಾ…?
ಶಿವಮೊಗ್ಗ :ಸುಗಮ ಮತ್ತು ಅಪಘಾತ ಮುಕ್ತ ಸಂಚಾರ ವ್ಯವಸ್ಥೆಯನ್ನು ಶಿವಮೊಗ್ಗ ನಗರದಲ್ಲಿ ಜಾರಿಗೊಳಿಸಲು ಹೊರಟಿರುವ ಶಿವಮೊಗ್ಗ ಪೊಲೀಸರು ಮೊದಲ ದಿನವೇ ಬರೋಬ್ಬರಿ 655 ಕೇಸ್ ಹಾಕುವ ಮೂಲಕ ವಾಹನ ಸವಾರರಿಗೆ ಭರ್ಜರಿ ಬಿಸಿ ಮುಟ್ಟಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಅಳವಡಿಸ ಲಾಗಿರುವ RLVD, SVD, PTZ, ASVD & ANPR ಕ್ಯಾಮರಾಗಳು Command and Control Center ಗೆ ಕಳುಹಿಸಿದ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ವಾಹನಗಳ ಫೊಟೋ ಮತ್ತು ವಿಡಿಯೋಗಳನ್ನು ಆಧರಿಸಿ ವಾಹನ ಮಾಲೀಕರಿಗೆ/ಸವಾರರಿಗೆ SMS ಮೂಲಕ ನೋಟೀಸ್ ಗಳನ್ನು ಕಳುಹಿಸಲಾಗುವ ವ್ಯವಸ್ಥೆಯನ್ನು ದಿನಾಂಕ 28-08-2023 ರಿಂದ ಅನುಷ್ಠಾನಕ್ಕೆ ತರಲಾಗಿದೆ.
ಆರಂಭವಾದ ಮೊದಲನೇ ದಿನ ಕ್ಯಾಮೆರಾಗಳು ಕಳುಹಿಸಿದ ಫೊಟೋ ಮತ್ತು ವಿಡಿಯೋಗಳನ್ನು ಆಧರಿಸಿದ ಪ್ರಕರಣಗಳು…
613 Singnal Jump,
36 Over Speed,
04 Without Helmate,
01 Without Seat Belt.
01 Mobile Riding
ಸಂಚಾರ ನಿಯಮ ಉಲ್ಲಂಘನೆ ಮಾಡಿದ ಒಟ್ಟು 655 ವಾಹನ ಸವಾರರ / ಮಾಲೀಕರಿಗೆ SMS ಮೂಲಕ ನೋಟಿಸ್ ಗಳನ್ನು ಕಳುಹಿಸಲಾಗಿದೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

C News TV Kannada News Online in cnewstv