Breaking News

ವಾಹನ ಸವಾರರೆ ಇಂದಿನಿಂದ ಡಬ್ಬಲ್ ಎಚ್ಚರವಹಿಸಿ..

Cnewstv / 28.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ವಾಹನ ಸವಾರರೆ ಇಂದಿನಿಂದ ಡಬ್ಬಲ್ ಎಚ್ಚರವಹಿಸಿ..

ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಇಂದಿನಿಂದ ವಾಹನ ಸವಾರರು ಡಬ್ಬಲ್ ಎಚ್ಚರವಹಿಸಬೇಕು. ಸ್ಪಲ್ಪ ಯಾಮಾರಿದರು ITMS ತಂತ್ರಾಂಶದ ಸಹಾಯದಿಂದ ಬರುತ್ತೆ
ನೋಟೀಸ್..

 

ಹೌದು, ನಗರದಲ್ಲಿ ಸುಗಮ ಮತ್ತು ಅಪಘಾತ ಮುಕ್ತ ಸಂಚಾರ ವ್ಯವಸ್ಥೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ Integrated Traffic Management System (ITMS) ನ ಅಡಿಯಲ್ಲಿ ಶಿವಮೊಗ್ಗ ನಗರದ ಪ್ರಮುಖ 13 ವೃತ್ತಗಳಲ್ಲಿ Adaptive Traffic Control System (ATCS) ಗಳನ್ನು 72 -Red Light Violation Detection (RLVD) ಕ್ಯಾಮರಾಗಳನ್ನು, 30 -Speed Violation Detection (SVD) ಕ್ಯಾಮರಾಗಳನ್ನು, 38 -Pan Tilt Zooming (PTZ) ಕ್ಯಾಮರಾಗಳನ್ನು,08 -Average Speed Violation Detection (ASVD) ಕ್ಯಾಮರಾಗಳನ್ನು, 10 -Smart Pole 360 Panoramic ಕ್ಯಾಮರಾಗಳನ್ನು, 44 -Automatic Number Plate Recognition (ANPR) ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಸದರಿ ಕ್ಯಾಮೆರಾಗಳು, ವಾಹನ ಸವಾರರು Without Helmet, Triple Riding, Mobile Riding, One Way, No Entry, No Parking, Signal Jump, Over Speed ಮುಂತಾದ ಕಣ್ಣಿಗೆ ಕಾಣುವ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದಾಗ ಅಂತಹ ವಾಹನಗಳ ಫೊಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಕೂಡಲೇ Command and Control Center ಗೆ ಕಳುಹಿಸಲಿದ್ದು, ಅವುಗಳನ್ನು ಪರಿಶೀಲಿಸಿ ಇಂದಿನಿಂದ (28-08-2023) ITMS ತಂತ್ರಾಂಶದ ಸಹಾಯದಿಂದ ನೋಟೀಸ್ ಗಳನ್ನು ಸೃಜಿಸಿ SMS / ಅಂಚೆ ಮುಖಾಂತರ ವಾಹನ ಮಾಲೀಕರಿಗೆ/ಸವಾರರಿಗೆ ನೋಟೀಸ್ ಗಳನ್ನು ಕಳುಹಿಸಲಾಗುತ್ತದೆ.

ಆದ್ದರಿಂದ ವಾಹನ ಸವಾರರು ಸಂಚಾರ ನಿಯಮವನ್ನು ಉಲ್ಲಂಘನೆ ಮಾಡದೆ, ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡಿ ವಾಹನ ಚಲಾಯಿಸಿ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*