Cnewstv / 26.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಯಾಗಬೇಕು..
ಶಿವಮೊಗ್ಗ : ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಗಳ ತನಿಖೆಯಾಗಬೇಕು ಯಾವುದೇ ಕಾರಣಕ್ಕೂ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿಯನ್ನು ತನ್ನ ಸುಪರ್ದಿಗೆ ಅವಸರದಲ್ಲಿ ತೆಗೆದುಕೊಳ್ಳಬಾರದು ಎಂದು ನಾಗರಿಕ ಹಿತರಕ್ಷಣಾ ಸಮಿತಿ ಬಲವಾಗಿ ಆಗ್ರಹಿಸಿದೆ.
ಮೀಡಿಯಾ ಹೌಸ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ವಿ. ವಸಂತಕುಮಾರ್ ಕಳೆದ ಐದು ವರ್ಷಗಳಲ್ಲಿ ಸ್ಮಾರ್ಟ್ ಸಿಟಿಗಾಗಿ ಸಾವಿರ ಕೋಟಿ ಹಣ ¨ಬಿಡುಗಡೆ ಮಾಡಲಾಗಿದೆ. ಆದರೆ ಯಾವ ಕಾಮಗಾರಿಗಳೂ ಕೂಡ ಇದುವರೆಗೂ ಪೂರ್ಣವಾಗಿಲ್ಲ. ಮತ್ತು ಕಳಪೆಯಾಗಿವೆ. ಆದರೆ ಪಾಲಿಕೆ ಅದರ ನಿರ್ವಹಣೆಯನ್ನು ತಾನೇ ವಹಿಸಿಕೊಳ್ಳುವಂತೆ ಹೇಳುತ್ತಿದೆ. ನಿಯಮದ ಪ್ರಕಾರ ಸ್ಮಾರ್ಟ್ ಸಿಟಿಯೇ ತನ್ನ ಗುತ್ತಿಗೆದಾರರ ಮೂಲಕ ಮುಂದಿನ ಐದು ವರ್ಷಗಳ ವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಆದರೆ ಈಗ ಈ ನಿರ್ವಹಣೆಯ ನಿಯಮವನ್ನೇ ತೆಗೆದುಹಾಕಲಾಗಿದೆ. ಅವಸರದಲ್ಲಿ ಪಾಲಿಕೆ ತನ್ನ ವಶಕ್ಕೆ ತೆಗೆದುಕೊಂಡು ಜನರ ತೆರಿಗೆ ಹಣದಲ್ಲಿ ನಿರ್ವಹಣೆ ಮಾಡಲು ಹೊರಟಿದೆ ಎಂದು ದೂರಿದರು.
ವಿವಿಧ ಪ್ಯಾಕೇಜ್ ಅಡಿ ಕಾಮಗಾರಿಗಳು ನಡೆದಿವೆ. ರಸ್ತೆ, ಚರಂಡಿ, ಫುಟ್ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ್ವೆನ್ಸಿ, ಸರ್ಕಲ್ ಆಭಿವೃದ್ಧಿ ಶೌಚಲಾಯಲ ಅಲ್ಲದೆ, ಮೆಸ್ಕಾಂ ಜೊತೆಗೂಡಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿಗಳನ್ನು ಕೂಡ ನಡೆಸಲಾಗಿದೆ. ಈ ಎಲ್ಲಾ ಕಾಮಗಾರಿಗಳು ಸಂಪೂರ್ಣ ಲೋಪದಿಂದ ಕೂಡಿವೆ. ಹಿಂದಿನ ಶಾಸಕರಿಗೆ ಹಲವು ಬಾರಿಈ ಬಗ್ಗೆ ದೂರು ನೀಡಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ಸುಮಾರು ೬೦ ದೂರುಗಳನ್ನು ನಾವೇ ಅಧಿಕೃತವಾಗಿ ನೀಡಿದ್ದೇವೆ. ಇಷ್ಟಾದರೂ ಲೋಪದೋಷ ಸರಿಪಡಿಸದೆ ಪಾಲಿಕೆ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವುದು ಖಂಡನಿಯ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments