Cnewstv / 26.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಗರದಲ್ಲಿ 3 ದಿನ ನಡೆಯಲಿದೆ ರಾಯರ ಆರಾಧನಾ ಮಹೋತ್ಸವ..
ಶಿವಮೊಗ್ಗ : ಬೊಮ್ಮನಕಟ್ಟೆಯ ದೇವಂಗಿ ರತ್ನಾಕರ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.31 ರಿಂದ ಸೆ.2ರ ವರೆಗೆ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 352 ನೇ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಮಠದ ಪ್ರಮುಖ ಭಕ್ತರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಾಲಯ ಶ್ರೀ ಸುಬುದೇಂದ್ರ ತೀರ್ಥಂಗಳವರ ಆಜ್ಞಾನುಸಾರ ಈ ನೂತನ ಮಠ ಪ್ರತಿಷ್ಠಾಪನೆ ಆದ ಬಳಿಕ ಇದೇ ಮೊದಲ ಬಾರಿಗೆ ಈ ಆರಾಧನಾ ಮಹೋತ್ಸವ ನಡೆಯುತ್ತಿದೆ. ಆ.೩೦ರಂದು ಸಂಜೆ ೬ಕ್ಕೆ ಗೋಪೂಜೆ, ಧ್ವಜಾರೋಹಣ, ಧನ, ಧಾನ್ಯ, ಪೂಜೆ ಸ್ವಸ್ತಿವಾಚನ, ಮಹಾಮಂಗಳಾರತಿ ಇದ್ದು, ಮುಖ್ಯ ಅತಿಥಿಗಳಾಗಿ ನಾನು ಭಾಗವಹಿಸಲಿದ್ದೇನೆ.
ಆ. ೩೧ರಂದು ಪೂರ್ವಾರಾಧನೆ ಇದ್ದು, ಬೆಳಿಗ್ಗೆ ೫-೩೦ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.೧ರಂದು ಶ್ರೀ ಗುರುರಾಜರ ಮಧ್ಯಾರಾಧನೆ ಇದ್ದು, ಸೆ.೨ರ ಶನಿವಾರ ಉತ್ತಾರಾರಾಧನೆ ನಡೆಯಲಿದೆ. ಮೂರೂ ದಿನಗಳ ಕಾಲ ಸಂಜೆ ೬ರಿಂದ ಭಜನೆ, ವೀಣಾವಾದನ. ಪ್ರವಚನ ನಡೆಯಲಿದ್ದು, ಪಲ್ಲಕ್ಕಿ ಸೇವೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಸಾರ್ವಜನಿಕರು ಹಾಗೂ ಭಕ್ತರು ತನುಮನ ಧನ ನೀಡಿ ಸಹಕರಿಸುವಂತೆ ಅವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಧೀರೇಂದ್ರ ಆಚಾರ್, ಅಶ್ವತ್ಥನಾರಾಯಣ ಶೆಟ್ಟಿ, ಸುಧೀಂದ್ರ, ಮಧುಸೂದನ್ ಕುಬೇರಪ್ಪ, ಪ್ರಶಾಂತ್, ಅಣ್ಣಪ್ಪ ಮತ್ತಿತರರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399