Breaking News

ಗಾಂಧಿ ಪ್ರತಿಮೆ ದ್ವಂಸ ಪ್ರಕರಣ, ಇಬ್ಬರು ಆರೋಪಿಗಳ ಬಂಧನ..

Cnewstv / 24.08.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗಾಂಧಿ ಪ್ರತಿಮೆ ದ್ವಂಸ ಪ್ರಕರಣ, ಇಬ್ಬರು ಆರೋಪಿಗಳ ಬಂಧನ..

ಶಿವಮೊಗ್ಗ : ಹೊಳೆಹೊನ್ನೂರು ಸರ್ಕಲ್ ನಲ್ಲಿ ಇರುವ ಗಾಂಧಿ ಪ್ರತಿಮೆ ದ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 21ರಂದು ರಾತ್ರಿ ಗಾಂಧಿ ಪ್ರತಿಮೆಯನ್ನು ದ್ವಂಸ ಮಾಡಲಾಗಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗಣೇಶ್ (24) ಹಾಗೂ ವಿನಯ್ (25) ಎಂಬ ಇಬ್ಬರು ಆರೋಪಿಗಳನ್ನ ಚಿತ್ರದುರ್ಗದ ಪಂಡರಹಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು, ನಾನು ಕೂಡ ಸ್ಥಳಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೆ‌ ಈ ಕೇಸ್ ಪತ್ತೆಗಾಗಿ ಮೂವರು ಪ್ರತ್ಯೇಕ ಟೀಮ್ ಗಳನ್ನ ಮಾಡಲಾಗಿತ್ತು‌. ಅಧಿಕಾರಿ ಸಿಬ್ಬಂದಿ ಸೇರಿದಂತೆ ಸುಮಾರು 50 ಜನ ಸಿಬ್ಬಂದಿಗಳು ಈ ವಿಚಾರವಾಗಿ ಕೆಲಸ ಮಾಡಿದ್ದಾರೆ.‌

ಈ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ವಶಕ್ಕೆ ಪಡೆದಿದ್ದೇವೆ‌ ಚಿತ್ರದುರ್ಗದಿಂದ ಜೋಗಕ್ಕೆ ಹೋಗುವ ಮಾರ್ಗ ಮಧ್ಯೆ ಈ ಕೃತ್ಯ ಮಾಡಿದ್ದಾರೆ. ಪ್ರತಿಮೆ ದ್ವಂಸಗೊಳಿಸಿ ಶಿವಮೊಗ್ಗಕ್ಕೆ ಹೋಗಿ ಮರಳಿ ಮತ್ತೆ ಚಿತ್ರದುರ್ಗಕ್ಕೆ ಹೋಗಿದ್ದಾರೆ. ಇಬ್ಬರನ್ನು ಬಂದಿಸಿ, ತನಿಖೆ ಮುಂದುವರೆಸಿದ್ದೇವೆ ಎಂದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*