Cnewstv / 22.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸಹಾಯಧನ ನೀಡಲು ಅರ್ಜಿ ಆಹ್ವಾನ.
ಶಿವಮೊಗ್ಗ : 2023-24 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ವಿವಿಧ ಕಾರ್ಯಕ್ರಮಗಳಡಿ ಅನುದಾನ ಲಭ್ಯತೆ, ಹೋಬಳಿವಾರು ಹಂಚಿಕೆ ಮತ್ತು ಜೇಷ್ಟತೆಯ ಆಧಾರದ ಮೇಲೆ ಸಹಾಯಧನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರದೇಶ ವಿಸ್ತರಣೆಯಡಿ ಜಾಯಿಕಾಯಿ, ಗೇರು, ಕಾಳು ಮೆಣಸು, ಬೆಣ್ಣೆಹಣ್ಣು, ಹಲಸು ಮತ್ತು ಕಾಳುಮೆಣಸು ಪುನಃಶ್ಚೇತನ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪ್ಯಾಕ್‍ಹೌಸ್, ಸೋಲಾರ್ ಟನಲ್ ಡ್ರೈಯರ್ ಹಾಗೂ ವಿವಿಧೋದ್ದೇಶ ಪ್ರಾಥಮಿಕ ಸಂಸ್ಕರಣಾ ಘಟಕಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಆಸಕ್ತ ಹಾಗೂ ಅರ್ಹ ರೈತರು ಸೆಪ್ಟೆಂಬರ್ 10 ರೊಳಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕುಶಾವತಿಯಲ್ಲಿರುವ ತೋಟಗಾರಿಕೆ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಹೋಬಳಿವಾರು ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಕರೆ ಮಾಡಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv