Breaking News

ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಠಾನಗೊಂಡಿರುವ ಕಾಮಗಾರಿಗಳ ಜಂಟಿ ಪರಿವೀಕ್ಷಣೆ..

Cnewstv / 21.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಠಾನಗೊಂಡಿರುವ ಕಾಮಗಾರಿಗಳ ಜಂಟಿ ಪರಿವೀಕ್ಷಣೆ..

ಶಿವಮೊಗ್ಗ : ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಪ್ಯಾಕೇಜ್ ಗಳಲ್ಲಿ ಆಯ್ದ ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ಫುಟ್ಬಾತ್, ಪಾರ್ಕ್ ಬಸ್ ಶೆಲ್ಟರ್, ಸರ್ಕಲ್ ಅಭಿವೃದ್ಧಿ, ಶೌಚಾಲಯ ಇತ್ಯಾದಿಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.

ನಿರ್ಮಾಣ ಕಾಮಗಾರಿಗಳನ್ನು ಹಸ್ತಾಂತರಿಸಲು ಪತ್ರಿಸಲಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ, ಅನುಸಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಜಂಟಿ ಪರೀ ವೀಕ್ಷಣೆ ನಡೆಸಿ, ನೂನ್ಯತೆ ಇದ್ದಲ್ಲಿ ಸರಿಪಡಿಸಿಕೊಂಡು ಹಸ್ತಾಂತರಗೊಳಿಸಲು ನಿರ್ಧರಿಸಲಾಗಿರುತ್ತದೆ ಅದರಂತೆ ಪ್ರಾಥಮಿಕ ಹಂತವಾಗಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ. ವತಿಯಿಂದ ಅಳವಡಿಸಲಾದ ಭೂಗತ ಕೇಬಲ್, ಬೀದಿ ದೀಪದ ಕಂಬಗಳ ಸಂಬಂಧ ಮೆಸ್ಕಾಂ ಶಿವಮೊಗ್ಗ ಮಹಾನಗರ ಪಾಲಿಕೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ವಾರ್ಡ್ ಸದಸ್ಯರು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಗುತ್ತಿಗೆದಾರರ ಸಮ್ಮುಖದಲ್ಲಿ ವೇಳಾಪಟ್ಟಿಯಂತೆ ಜಂಟಿ ಸ್ಥಳ ಪರಿಶೀಲನೆ, ಸಮೀಕ್ಷೆ ನಡೆಸಿ, ನ್ಯೂನ್ಯತೆ ಗುರುತಿಸಿ ನಂತರದ ದಿನಗಳಲ್ಲಿ ಸರಿಪಡಿಸಿಕೊಳ್ಳಲು ನಿಯಮಾನುಸಾರ ಉದ್ದೇಶಿಸಲಾಗಿದೆ..

ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿ. ನಿಂದ ನಿರ್ಮಿಸಿದ ಭೂಗತ ಕೇಬಲ್, ಬೀದಿದೀಪ ಕಂಬಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ದೂರು, ಸಮಸ್ಯೆ ಇದ್ದಲ್ಲಿ ಲಿಖಿತವಾಗಿಯಾಗಲಿ ಅಥವಾ ಸದರಿ ದಿನ ಮತ್ತು ಸೂಚಿತ ಸಮಯದಂತೆ ಸ್ಥಳದಲ್ಲಿ ಹಾಜರಿದ್ದಾಗಲಿ ಪರಿವೀಕ್ಷಣೆಗೆ ಸಹಕರಿಸಲು ಸ್ಮಾರ್ಟ್ ಸಿಟಿ ಲಿ.‌ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ

ಭೇಟಿಯ ಸ್ಥಳ ಮತ್ತು ದಿನಾಂಕ..

22.08.2023

ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ,

ಪ್ಯಾಕೇಜ್ 1 : ದುರ್ಗಿಗುಡಿ, ಸವರ್ ಲೈನ್ ರೋಡ್ ದೇವಸ್ಥಾನದ ಹತ್ತಿರ, ಗಾರ್ಡನ್ ಏರಿಯಾ ಗೌರವ್ ಲಾಡ್ಡ್ ಎದುರುಗಡೆ, ಗಾರ್ಡನ್ ಏರಿಯ ಸ್ಕ್ರ್ಯಾಪ್ ಶಾಪ್ ಎದುರುಗಡೆ,ಜ್ಯೂಯೆಲ್ ರಾಕ್ ರಸ್ತೆ, ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ, ಮಿಷನ್ ಕಾಂಪೌಂಡ್ ಪ್ರೈವೇಟ್ ಬಸ್ ಸ್ಟ್ಯಾಂಡ್ ಎದುರು.

23.08.2023

ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ

ಪ್ಯಾಕೇಜ್ 2 (A) : ಜೈಲ್ ರೋಡ್, ಎ ಎನ್ ಕೆ ರಸ್ತೆ, ವೆಂಕಟೇಶ್ ನಗರ, ಗಾಂಧಿನಗರ, ಚೆನ್ನಪ್ಪ ಲೇಔಟ್, ರವೀಂದ್ರ ನಗರ, ಅಚ್ಚುತ್ ರಾವ್ ಲೇಔಟ್, ಗಾಂಧಿನಗರ ಮುಖ್ಯ ರಸ್ತೆ

ಪ್ಯಾಕೇಜ್ 2 (B) : ಶರಾವತಿ ನಗರ, ಹೊಸಮನೆ, ಕುವೆಂಪು ರಸ್ತೆ, ಲಾಸ್ಟ್ ಮೈಲ್ ಕನೆಕ್ಟಿವಿಟಿ (LMC)

24.08.2023

ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೆ

ಪ್ಯಾಕೇಜ್ 3 (A) : ಜಯ ನಗರ, ಬಸವನಗುಡಿ, ವಿನಾಯಕ ನಗರ, ಹನುಮಂತನಗರ, AA ಕಾಲೋನಿ.

25.08.2023

ಬೆಳಗ್ಗೆ 10 ಗಂಟೆಯಿಂದ 12 ಗಂಟೆಯ ತನಕ

ಪ್ಯಾಕೇಜ್ 3 (B) : ಸೋಮಯ್ಯ ಲೇಔಟ್, ಬಾಪೂಜಿನಗರ, ಟ್ಯಾಂಕ್ ಮೊಹಲ್ಲಾ, ಕೋಟೆ ರಸ್ತೆ, ಸಿಎಲ್ ರಾಮಣ್ಣ ರಸ್ತೆ, ಎಪಿಎಂಸಿ ರಸ್ತೆ, ಗುಂಡಪ್ಪ ಶೆಡ್, ಶೇಷಾದ್ರಿಪುರಂ..

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*