Breaking News

ಬಿಕ್ಕೋನಹಳ್ಳಿ ಗ್ರಾಮದಲ್ಲಿ ನರಹಂತಕ ಚಿರತೆ ಸೆರೆ.

Cnewstv / 19.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಬಿಕ್ಕೋನಹಳ್ಳಿ ಗ್ರಾಮದಲ್ಲಿ ನರಹಂತಕ ಚಿರತೆ ಸೆರೆ.

ಶಿವಮೊಗ್ಗ: ತಾಲೂಕಿನ ಬಿಕ್ಕೋನಹಳ್ಳಿ, ಬೀರನಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ ನರಹಂತಕ ಚಿರತೆ ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯ ಇಲಾಖೆ ಹಾಗೂ ಮೈಸೂರಿನ ಸ್ಪೆಷಲ್ ಟಾಸ್ಕ್ ಫೋರ್ಸ್ ಯಶಸ್ವಿಯಾಗಿದೆ. ಬನ್ನಿಕೆರೆಯಲ್ಲಿ ನಿನ್ನೆ ಹಗಲಲ್ಲೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ, ನಿನ್ನೆ ರಾತ್ರಿ ವೇಳೆಗೆ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಸೆರೆ ಹಿಡಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಕೊಂಡೋಯ್ದಿದ್ದು, ಆರೋಗ್ಯ ಪರೀಕ್ಷೆಯ ಬಳಿಕ ಬಿಡುವ ಅಥವಾ ಸೆರೆಯಲ್ಲೆ ಮುಂದುವರೆಸುವ ನಿರ್ಧಾರ ಕೈಗೊಳ್ಳಲಿದ್ದಾರೆ.

 

ಕಳೆದ ವಾರವಷ್ಟೇ ಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಿಕೋನಹಳ್ಳಿ ಗ್ರಾಮದ ಯಶೋದಮ್ಮರನ್ನು ಸಾಯಿಸಿದ್ದ ಚಿರತೆ, ಬೀರನಕೆರೆ ಯಲ್ಲಿ ಮನೆಯ ಬಳಿ ಕಟ್ಟಿದ್ದ ನಾಯಿಯನ್ನು ಕಚ್ಚಿ ಸಾಯಿಸಿತ್ತು. ಈಗ ಚಿರತೆ ಸೆರೆಯಿಂದ ನಾಲ್ಕೈದು ಹಳ್ಳಿಗಳ ಗ್ರಾಮಸ್ಥರು ಸದ್ಯಕ್ಕೆ ನಿಟ್ಟುಸಿರು ಬಿಟ್ಟರೂ, ಈ ಭಾಗದಲ್ಲಿ ಮತ್ತಷ್ಟು ಚಿರತೆಗಳಿರುವ ಸಾಧ್ಯತೆಯಿದ್ದು, ಕಾರ್ಯಾಚರಣೆ ಮುಂದುವರೆಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*