Cnewstv / 19.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ತುಂಗಾ ಜಲಾಶಯದಲ್ಲಿ ವಿವಿಧ ತಳಿಯ ಸ್ಪಾನ್ ಮೀನುಮರಿಗಳ ಬಿತ್ತನೆ.
ಶಿವಮೊಗ್ಗ : ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ರೋಹು ಜಾತಿ ಸ್ಪಾನ್ ಮರಿಗಳನ್ನು ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ ಹಿನ್ನೀರಿಯಲ್ಲಿ ದಾಸ್ತಾನು ಮಾಡಲಾಯಿತು.
ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ಉತ್ಪಾದಿಸಬಹುದಾದ ಸ್ಪಾನ್ ಮೀನು ಮರಿಗಳನ್ನು ಮಳೆಯ ಅಭಾವದಿಂದ ಮೀನುಕೃಷಿಕರಿಂದ ಯಾವುದೇ ಬೇಡಿಕೆ ಇಲ್ಲದೆ ಇರುವುದರಿಂದ ಹಾಗೂ ತಾಯಿ ಮೀನುಗಳನ್ನು ವರ್ಷಪೂರ್ತಿ ಪೌಷ್ಠಿಕಾಂಶಯುಕ್ತ ಆಹಾರ ನೀಡಿ ಸಾಕಾಣಿಕೆ ಮಾಡಿ ಅವುಗಳನ್ನು ಸಂತಾನೋತ್ಪತ್ತಿಗೆ ಉಪಯೋಗಿಸದೇ ಇದ್ದಲ್ಲಿ ಗರ್ಭಕಟ್ಟಿದ ಮೊಟ್ಟೆಯು ಮರುಹೀರಿಕೆಯಾಗುತ್ತದೆ.
ಇದರಿಂದಾಗಿ ಮಾಂಸಖಂಡಗಳಲ್ಲಿ ಕೊಬ್ಬು ಶೇಖರಣೆಗೊಂಡು ಮುಂದಿನ ದಿನಗಳಲ್ಲಿ ಸಂತಾನೋತ್ಪತ್ತಿ ಸಮಯದಲ್ಲಿ ಪ್ಲಗಿಂಗ್ ಆಗುವ ಸಾಧ್ಯತೆ ಇರುತ್ತದೆ ಮತ್ತು ಮುಂದಿನ ವರ್ಷಗಳಲ್ಲಿಯೂ ಸಹ ತಾಯಿ ಮೀನುಗಳು ಸಂತಾನೋತ್ಪತ್ತಿ ಮಾಡದಿರಬಹುದಾದ ಸಂಭವವಿರುತ್ತದೆ.
ಆದುದರಿಂದ ಗಾಜನೂರು ಮೀನುಮರಿ ಉತ್ಪಾದನಾ ಕೇಂದ್ರದಿಂದ ಹಂತ ಹಂತವಾಗಿ ಉತ್ಪಾದಿಸಬಹುದಾದ 2.16 ಕೋಟಿ ಸ್ಟಾನ್ ಮೀನುಮರಿಗಳನ್ನು ತುಂಗಾ ಜಲಾಶಯದಲ್ಲಿ ದಸ್ತಾನಿಕರಿಸಲು ಬೆಂಗಳೂರು ಮೀನುಗಾರಿಕೆ ನಿರ್ದೇಶಕರು ಆದೇಶಿಸಿರುವ ಮೇರೆಗೆ ಆ.17 ರಂದು ಅಪರ ನಿರ್ದೇಶಕರಾದ(ಒಳನಾಡು) ಡಿ ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ರೂ. 0.80560 ಲಕ್ಷ ಮೌಲ್ಯದ 53 ಲಕ್ಷ ರೋಹು ಜಾತಿ ಸ್ಪಾನ್ ಮರಿಗಳನ್ನು ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದ ಹಿನ್ನೀರಿಯಲ್ಲಿ ದಾಸ್ತಾನು ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ವಲಯ ಜಂಟಿ ನಿರ್ದೇಶಕರು ಗಿರೀಶ್ ಓ, ಶಿವಮೊಗ್ಗ ಜಿಲ್ಲೆ ಮೀನುಗಾರಿಕೆ ಉಪ ನಿರ್ದೇಶಕರು ಶಿವಕುಮಾರ್ ಜಿ ಎಂ, ಶಿವಮೊಗ್ಗ ಜಲಾಶಯ ವಿಭಾಗದ ಮೀನುಗಾರಿಕೆ ಉಪ ನಿರ್ದೇಶಕರು ಸತೀಶ್ ಎಸ್ ಕೆ, ಗಾಜನೂರು ಗಂಗಾಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರು ಅರಸಯ್ಯ, ಮತ್ತು ಸಂಘದ ಆಡಳಿತ ಮಂಡಳಿ ಸದಸ್ಯರು, ಮೀನುಗಾರರು, ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಪ್ರದೀಪ್, ರಾಘವೇಂದ್ರ ಕೆ ಎಸ್ ಹಾಗೂ ಇಲಾಖೆಯ ಸಹೋದ್ಯೋಗಿಗಳು ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv