Cnewstv / 16.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹಿರಿಯ ಅಧಿಕಾರಿ ಸ್ಥಾನ.. SP ಯಿಂದಲೇ ಸ್ವಾಗತ..
ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆಗೆ ನೂತನ ಇನ್ಸ್ಪೆಕ್ಟರ್ ನೇಮಕವಾಗಿದ್ದು ಅವರನ್ನು ಸ್ವತಂ ಜಿಲ್ಲಾ ರಕ್ಷಣಾಧಿಕಾರಿಗಳೇ ಸ್ವಾಗತ ಕೋರಿದ್ದಾರೆ.
ಇನ್ಸ್ಪೆಕ್ಟರ್ ಅಧಿಕಾರ ಸ್ವೀಕರಿಸುವುದು, ವರ್ಗಾವಣೆಯಾಗುವುದು ಸಾಮಾನ್ಯ ಇದರಲ್ಲಿ ಏನು ದೊಡ್ಡ ಸುದ್ದಿ ಅಂತ ಯೋಚನೆ ಮಾಡ್ತಾ ಇದ್ದೀರಾ ?? ಹೌದು ಇವತ್ತು ಅಧಿಕಾರ ಸ್ವೀಕಾರ ಮಾಡಿರುವುದು ಒಂದನೇ ತರಗತಿಯಲ್ಲಿ ಓದುತ್ತಿರುವಂತಹ ಆಜಾದ್ ಖಾನ್.. ಈ ಬಾಲಕ ಇಂದು ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನ ಧರಿಸಿ ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಿದ್ದಾರೆ.
ಯಾರು ಈ ಬಾಲಕ ಆಜಾದ್ ಖಾನ್ ?? ಹೇಗೆ ಅಧಿಕಾರ ಸ್ವೀಕರಿಸಿದ್ದಾರೆ ಇಲ್ಲಿದೆ ವಿವರ…
ತಬ್ರೇಜ್ ಖಾನ್ ಹಾಗೂ ನಗ್ಮಾ ರವರ ಎಂಟು ವರ್ಷದ ಮಗ ಆಜಾದ್ ಖಾನ್. ಈ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಈ ಬಾಲಕ ತಾನು ಪೊಲೀಸ್ ಅಧಿಕಾರಿ ಆಗಬೇಕೆಂಬ ಇಚ್ಛೆ ಹೊಂದಿದ್ದು. ಬಾಲಕ ಹಾಗೂ ಆತನ ಪೋಷಕರ ಕೋರಿಕೆಯ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಗಳಾದ ಮಿಥುನ್ ಕುಮಾರ್ ಅವರು, ಆಜಾನ್ ಖಾನ್ ಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನ ಧರಿಸಿ, ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಇನ್ನು ಅಧಿಕಾರ ಸ್ವೀಕರಿಸಿದ ನೂತನ ಇನ್ಸ್ಪೆಕ್ಟರ್ ಆಜಾದ್ ಖಾನ್ ರೋಲ್ ಕಾಲ್ ನಡೆಸಿದರು. ಪೊಲೀಸರಿಗೆ ಡ್ಯೂಟಿ ಬದಲಿಸುವುದು. ಇನ್ನು ಕೆಲವು ಸಿಬ್ಬಂದಿಗಳಿಗೆ ರಜೆಯನ್ನು ಕೂಡ ನೀಡಿದರು.
ಪೂರ್ಣ ವಿಡಿಯೋ ಗಾಗಿ…
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv