Cnewstv / 16.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ವಿವಿಧ ಯೋಜನೆಯಡಿ ಆನ್ಲೈನ್ ಅರ್ಜಿ ಆಹ್ವಾನ.
ಶಿವಮೊಗ್ಗ : ಶಿವಮೊಗ್ಗ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2023-24ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಬಂಡಾವಳ ಹೂಡಿಕೆ ಸಹಾಯಧನ, ತರಬೇತಿ ಹಾಗೂ ತರಬೇತಿ ಪಡೆದ ಫಲಾನುಭವಿಗಳಿಗೆ ಸುಧಾರಿತ ಉಪಕರಣ ವಿತರಣೆ, ವೃತ್ತಿಪರ/ವೃತ್ತಿ ನಿರತ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಮತ್ತು ಬಡ್ಡಿ ಸಹಾಯಧನ ಸೌಲಭ್ಯ ನೀಡಲು ಆಸಕ್ತ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಇಲಾಖೆಯ https://shimoga.nic.in ಪೊರ್ಟಲ್ ಮೂಲಕ ದಿ: 15/09/2023 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-223376, ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9380561275, ಸೊರಬ, ಶಿಕಾರಿಪುರ, ಹೊಸನಗರ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9481743640 ಹಾಗೂ ಸಾಗರ ಕೈಗಾರಿಕಾ ವಿಸ್ತರಣಾಧಿಕಾರಿ ದೂ.ಸಂ.: 9448401714 ಗಳನ್ನು ಸಂಪರ್ಕಿಸುವುದು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments