Breaking News

ಶಿವಮೊಗ್ಗಕ್ಕೆ ಬಂತು ಇಂಡಿಯಾ – ಪಾಕಿಸ್ತಾನ ಯುದ್ಧದಲ್ಲಿ ಬಳಸಿದ ಯುದ್ದ ಟ್ಯಾಂಕರ್..

Cnewstv / 12.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗಕ್ಕೆ ಬಂತು ಇಂಡಿಯಾ – ಪಾಕಿಸ್ತಾನ ಯುದ್ಧದಲ್ಲಿ ಬಳಸಿದ ಯುದ್ದ ಟ್ಯಾಂಕರ್..

ಶಿವಮೊಗ್ಗ : ನಗರಕ್ಕೆ ಇಂಡಿಯಾ ಪಾಕಿಸ್ತಾನ್ ಯುದ್ಧದಲ್ಲಿ ಬಳಕೆ ಮಾಡಲಾಗಿದ್ದ ಯುದ್ಧದ ಟ್ಯಾಂಕರ್ ಆಗಮಿಸಿದ್ದು, ಇದಕ್ಕೆ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.

ರಷ್ಯಾ ನಿರ್ಮಿತ ಟಿ 55 ಹೆಸರಿನ ವಿಶೇಷ ಯುದ್ಧ ಟ್ಯಾಂಕರ್, 1971ರ ಇಂಡಿಯಾ ಪಾಕಿಸ್ತಾನ ಯುದ್ಧದಲ್ಲಿ ಬಳಕೆ ಮಾಡಲಾಗಿತ್ತು. ಉಪೇಂದ್ರ ರಕ್ಷಣಾ ಸಚಿವಾಲಯದ ಬಳಿಕ
ಟ್ಯಾಂಕರ್ ರನ್ನು ಶಿವಮೊಗ್ಗಕ್ಕೆ ತರಲಾಗಿದೆ.

ರಾಯಣ್ಣ ಸರ್ಕಲ್ ನಿಂದ ಎಂಆರ್‌ಎಸ್ ಸರ್ಕಲ್ ನವರೆಗೆ ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ತರಲಾಯಿತು. ಮೆರವಣಿಗೆಯಲ್ಲಿ ಮಹಿಳಾ ಡೊಳ್ಳು ಕುಣಿತ ಹಾಗೂ ಚಂಡ ವಾದ್ಯಗಳನ್ನು ಹೆಚ್ಚು ಗಮನಸೆಳೆಯಿತು.

32 ಸಾವಿರ ಕೆಜಿಯ ಟ್ಯಾಂಕರ್ ಅನ್ನು ಕ್ರೇನ್ ಮೂಲಕ ಕೆಳಗಿಳಿಸಲಾಯಿತು. ಪ್ರಸ್ತುತ ಎಂಆರ್ ಎಸ್ ಸರ್ಕಲ್ ಬಳಿಯ ಕೆಇಬಿ ಕಚೇರಿ ಆವರಣದಲ್ಲಿ ಈ ಟ್ಯಾಂಕರ್ ಅನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದು, ಶೀಘ್ರವೇ ನಗರದ ಪ್ರಮುಖ ವೃತದಲ್ಲಿ ಸ್ಥಾಪಿಸಲಾಗುವುದು.‌.‌

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*