Cnewstv / 11.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮಾಜಿ ಗೃಹ ಸಚಿವರ ಕ್ಷೇತ್ರದಲ್ಲಿ ತಪ್ಪದ ಜನರ ಗೋಳು.
ಶಿವಮೊಗ್ಗ : ಕೆಸರಿನಲ್ಲಿ ರಸ್ತೆ ಇದೆಯೋ ಅಥವಾ ರಸ್ತೆಯಲ್ಲಿ ಕೆಸರು ಇದ್ಯಾ ಎಂಬಂತೆ ಇರುವ ಹಾಲುಮಹಿಷಿ ಗ್ರಾಮದಿಂದ ಮಜಿರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಪ್ರತಿ ದಿನ ಶಾಲಾ ಮಕ್ಕಳು, ಗ್ರಾಮಸ್ಥರು, ಮಹಿಳೆಯರು ಓಡಾಡುತ್ತಿದ್ದಾರೆ.
ಹೌದು, ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ರವರ ಕ್ಷೇತ್ರದಲ್ಲಿ ಜನರ ಗೋಳು ಹೇಳು ತೀರದಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜಿರೆ ಗ್ರಾಮಗಳನ್ನ ಸಂಪರ್ಕಿಸುವ ರಸ್ತೆಗಳು ಕೆಸರುಗದ್ದೆಯಾಗಿದೆ. ಉದಯಪುರ, ಕಿಕ್ಕೇರಿ, ಅಮ್ತಿ, ಬಚ್ಚಿನಕೂಡುಗೆ, ಸುರಳಿ ಗ್ರಾಮದ ಜನರು ರಸ್ತೆ ದಾಟಲು ಪರದಾಡುತ್ತಿದ್ದಾರೆ.
ಈ ಹದಗೆಟ್ಟ ರಸ್ತೆಗಳಲ್ಲಿ ಕಾರು, ಬೈಕು ಇರಲಿ ನಡೆದುಕೊಂಡು ಹೋಗುವುದು ಕೂಡ ದುಸ್ತರವಾಗಿದೆ. ಈ ಭಾಗದ ಗ್ರಾಮಗಳಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಜೋಲಿ ಕಟ್ಟಿ ಹೊರಬೇಕಾದ ಸ್ಥಿತಿ ಇದೆ. ರಸ್ತೆ ಮಾತ್ರವಲ್ಲದೆ ಯಾವುದೇ ಮೂಲಭೂತತ ಸೌಕರ್ಯವಿಲ್ಲದೆ ಜನರು ತೀವ್ರ ಸಂಕಷ್ಟವನ್ನ ಅನುಭವಿಸುತ್ತಿದ್ದಾರೆ.
ಎರಡೆರಡು ಬಾರಿ ಅರಗಜ್ಞಾನೇಂದ್ರ ಅವರು ಶಾಸಕರಾದರೂ ಕೂಡ ಗ್ರಾಮಗಳತ್ತ ಗಮನ ಹರಿಸಿಲ್ಲ. ಕೇವಲ 4 ಕಿಲೋಮೀಟರ್ ಡಾಂಬರ್ ರಸ್ತೆ ನೀಡಲು ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಅರಗ ಜ್ಞಾನೇಂದ್ರ ಹಾಗೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಇನ್ನಾದರೂ ನಮಗೆ ಶೀಘ್ರವೇ ರಸ್ತೆ ನಿರ್ಮಾಣ ಮಾಡಿ ಕೊಡಿ ಇಲ್ಲವಾದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ…
ಇನ್ನಾದರೂ ಮಾಜಿ ಗೃಹ ಸಚಿವರು ಇತ್ತ ಗಮನಹರಿಸಲಿ ಎಂಬುದು ನಮ್ಮ ಆಶಯ…
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv