Cnewstv / 08.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬಹುಭಾಷಾ ನಟ ಪ್ರಕಾಶ್ ರಾಜ್ ಭೇಟಿ ನೀಡಿದ ಕಾಲೇಜಿಗೆ ಗೋಮೂತ್ರ, ನೀರು ಹಾಕಿ ಶುದ್ಧೀಕರಣ ಮಾಡಿದ ವಿದ್ಯಾರ್ಥಿಗಳು.
ಶಿವಮೊಗ್ಗ : ಬಹುಭಾಷಾ ನಟ ಪ್ರಕಾಶ್ ರಾಜ್ ರವರು ಭೇಟಿ ನೀಡಿದ ಕಾಲೇಜಿಗೆ ವಿದ್ಯಾರ್ಥಿಗಳು ಗೋಮೂತ್ರ ನೀರು ಹಾಕಿ ಶುದ್ಧೀಕರಣ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ಭದ್ರಾವತಿಯ ಸರ್ ಎಂ ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ, ರಂಗಭೂಮಿ ಸಿನಿಮಾ ಮತ್ತು ಸಮಾಜ ವಿಷಯಕ್ಕೆ ಸಂಬಂಧಪಟ್ಟ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಖ್ಯಾತ ನಟ ಪ್ರಕಾಶ್ ರಾಜ್ ಅವರು ಹಾಜರಾಗಿದ್ದರು.
ಆದರೆ ಸಂವಾದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳನ್ನು ಹೊರಗಿಟ್ಟ ಮಾಡಿದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರಕಾಶ್ ರಾಜ್ ವಿರುದ್ಧ ದಿಕ್ಕಾರಗಳನ್ನ ಕೂಗಿದರು. ಇನ್ನೂ ವಿದ್ಯಾರ್ಥಿಗಳು ಸಭಾಂಗಣದ ಒಳ ನುಗ್ಗಲು ಪ್ರಯತ್ನಿಸಿದ ವೇಳೆ ಪೊಲೀಸರು ಬ್ಯಾರೀಕೇಡ್ ಹಾಕಿ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ತಡೆದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಳಿಕ ಭದ್ರಾವತಿ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮದ ನಂತರ ಕೊಠಡಿಗಳನ್ನು ಗೋಮೂತ್ರ ಹಾಗೂ ನೀರು ಹಾಕಿ ಶುದ್ಧೀಕರಣ ಗೊಳಿಸಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments