Cnewstv / 08.08.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇಂದು ಮಧ್ಯರಾತ್ರಿ ಬೆಂಗಳೂರು ತಲುಪಲಿರುವ ಸ್ಪಂದನ ಮೃತದೇಹ
ಬೆಂಗಳೂರು : ಸ್ಪಂದನ ವಿಜಯ ರಾಘವೇಂದ್ರ ರವರ ಮೃತ ದೇಹ ಇಂದು ಮಧ್ಯರಾತ್ರಿ ಬೆಂಗಳೂರು ತಲುಪಲಿದೆ ಎಂದು ಸ್ಪಂದನ ಚಿಕ್ಕಪ್ಪ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಸೋಮವಾರ ಬೆಳಗಿನ ಜಾವ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಮೃತಪಟ್ಟಂತಹ ಸ್ಪಂದನ ವಿಜಯ ರಾಘವೇಂದ್ರ ರವರ ಮೃತ ದೇಹವನ್ನು ಥಾಯ್ ವಿಮಾನದ ಮೂಲಕ ಇಂದು ರಾತ್ರಿ 11 ಗಂಟೆಗೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದು ಅಲ್ಲಿಂದ ರಾತ್ರಿ 12:30ಕ್ಕೆ ಬಿ ಕೆ ಶಿವರಾಂರವರ ಮನೆ ತಲುಪಲಿದೆ.
ಅಂತಿಮ ನಮನ ಸಲ್ಲಿಸುವವರಿಗೆ ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯಾಹ್ನದ ತನಕ ಅವರ ಮನೆಯ ಮುಂದೆ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನದ ನಂತರ ಹರಿಶ್ಚಂದ್ರ ಘಾಟಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments